ನೆಲ್ಯಾಡಿ: ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ 2025ರ ಮೇ 28, ಬುಧವಾರದಂದು ಕಾಲೇಜು ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 10.30 ಗಂಟೆಗೆ ಆರಂಭವಾದ ಸಭಾ ಕಾರ್ಯಕ್ರಮವು ಬಹುಮಾನ ವಿತರಣೆಯೊಂದಿಗೆ ಸಂಭ್ರಮಪೂರ್ಣವಾಗಿತ್ತು.
ಕಾರ್ಯಕ್ರಮದಲ್ಲಿ ಕಾಲೇಜು ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉದಯ್, ಖಜಾಂಜಿಯಾದ ಶ್ರೀ ವಿಶ್ವನಾಥ್ ಶೆಟ್ಟಿ, ಸದಸ್ಯರಾದ ಶ್ರೀ ಸತೀಶ್ ಮತ್ತು ಶ್ರೀ ಪ್ರಶಾಂತ್ ಸಿ ಎಚ್ ಹಾಗೂ ಸಂಘದ ಸದಸ್ಯರಾದ ಶ್ರೀಮತಿ ಸೇಸಮ್ಮ ಅವರು ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಥ೯ಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೋರಿದ ಪ್ರತಿಭೆಗಾಗಿ ಪಟಕ ಹಾಗೂ ಪ್ರಶಸ್ತಿ ಪತ್ರಗಳೊಂದಿಗೆ ಸನ್ಮಾನಿತರಾದರು. ಶ್ರೀಮತಿ ಚಂದ್ರಕಲಾ ಸ್ವಾಗತಿಸಿದರು, ಡಾ. ಸೀತಾರಾಮ್ ಅವರು ಕಾಲೇಜಿನ ವಾರ್ಷಿಕ ಚಟುವಟಿಗಳ ವರದಿಯನ್ನು ಮಂಡಿಸಿದರು. ಶ್ರೀಯುತ ಸಚಿನ್ ಎನ್ ಟಿ ವಂದಿಸಿದರು ಹಾಗೂ ಶ್ರೀಮತಿ ಶ್ರುತಿ ಮತ್ತು ಪಾವನ ರೈ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಹಾಗೂ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗಿ ಸೇರಿದ್ದರು.
إرسال تعليق