ಕುಕ್ಕೆ ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ, ಸದಾನಂದ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ ಹಾಗೂ ಶ್ರೀ ಸುಬ್ರಹ್ಮಣ್ಯ ಮಠದ ಜಂಟಿ ಆಶ್ರಯದಲ್ಲಿ ಮೇ 21ರಿಂದ ಮೇ 30ರ ತನಕ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯುತ್ತಿದೆ.
ಈ ಶಿಬಿರದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಡಾ. ವಿಕ್ರಂ ಶೆಟ್ಟಿ ಅವರು, “ಈ ಉಚಿತ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳ ತಪಾಸಣೆ ನೆರವೇರಿಸಲಾಗುತ್ತದೆ. ಡಾ. ಗಿರೀಶ್ ಹಾಗೂ ಡಾ. ಪುಲ್ಕಿತ್ ಅವರ ತಜ್ಞರ ತಂಡ ಈ ಸೇವೆ ನೀಡಲಿದೆ. ಸಾರ್ವಜನಿಕರು ಇದನ್ನು ಲಾಭಪಡಿಸಿಕೊಳ್ಳಬೇಕೆಂದು ನಾವು ಮನವಿ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ.
ಸ್ಥಳ: ಶ್ರೀ ಸುಬ್ರಹ್ಮಣ್ಯ ಮಠ ಆವರಣ, ಕುಕ್ಕೆ ಸುಬ್ರಹ್ಮಣ್ಯ
ದಿನಾಂಕ: ಮೇ 21ರಿಂದ ಮೇ 30ರವರೆಗೆ
ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ತನಕ
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
Post a Comment