ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಬೋಳಂಬಳ್ಳಿಯ ಶ್ರೀ ಪಾರ್ಶ್ವನಾಥ ಸ್ವಾಮಿ ಪದ್ಮಾವತಿ ಅಮ್ಮನವರ ಕ್ಷೇತ್ರದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ (27 ಅಡಿ, ಪೀಠ ಸಹಿತ) ಹಾಗೂ ಸಿದ್ದ ಭಗವಾನ್ ಶ್ರೀರಾಮಚಂದ್ರ ದೇವರು ರಾಜಕುಮಾರಾವಸ್ಥೆಯ (21 ಅಡಿ, ಪೀಠ ಸಹಿತ) ಏಕಶಿಲಾ ಮೂರ್ತಿಗಳ ಪ್ರತಿಷ್ಠಾಪನೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಈ ಮಹಾಮಸ್ತಕಾಭಿಷೇಕ ಮತ್ತು ಪ್ರತಿಷ್ಠಾ ಮಹೋತ್ಸವವು 2025ರ ಮೇ 4ರಿಂದ 9ರವರೆಗೆ, ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು. ಆಚಾರ್ಯ ಶ್ರೀ ಗುಲಾಬೂಷಣ ಮುನಿಮಹಾರಾಜರ ಸಾನಿಧ್ಯದಲ್ಲಿ ಜೈನ ಆಗಮೋಕ್ತ ವಿಧಿ ವಿಧಾನಗಳ ಮೂಲಕ ಪೂಜಾ ಕಾರ್ಯಕ್ರಮಗಳು ನಡೆಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಅಕಲಂಕ ಕೇಸರಿ ಸ್ವಸ್ತಿಶ್ರೀ ಭಟ್ಟ ಕಲಂಕ ಭಟ್ಟಾರಕ ಸ್ವಾಮೀಜಿಯವರೂ ಉಪಸ್ಥಿತರಿದ್ದರು.
ಮೇ 9, 2025ರಂದು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೂರ್ತಿಗಳನ್ನು ಲೋಕಾರ್ಪಣೆಗೊಳಿಸಿದರು. ಈ ಧಾರ್ಮಿಕ ಸಮಾರಂಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಮಾಜಿ ಶಾಸಕರಾದ ಗೋಪಾಲ್ ಪೂಜಾರಿ, ಹಾಗೂ ಹಲವು ಗಣ್ಯರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಮುಖರು:
ಬೈಂದೂರು ಬ್ಲಾಕ್ ಬಿಜೆಪಿ ಅಧ್ಯಕ್ಷ ದೀಪಕ್ ಶೆಟ್ಟಿ
ಮಾಜಿ ಸಚಿವರು ಅಭಯ ಚಂದ್ರ ಜೈನ್
ಅಳದಂಗಡಿ ಸೀಮೆಯ ಅರಸರಾದ ಶ್ರೀ ತಿಮ್ಮಣ್ಣರಸ ಅಜೀಲರು
ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಮೋಹನ್ ಆಳ್ವ
ಪ್ರಕಾಶ್ ಚಂದ್ರ ಶೆಟ್ಟಿ ಕಂಬದ್ ಕೋಣೆ
ಧರ್ಮಸ್ಥಳದ ಶ್ರೀ ಹರ್ಷೇಂದ್ರ ಹೆಗ್ಗಡೆ
ವಿವಿಧ ಸಮಾಜದ ಪ್ರಮುಖರು, ಧಾರ್ಮಿಕ ಮುಖಂಡರು, ಹಾಗೂ ಊರಿನ ಗೌರವಾನ್ವಿತರು.
ಈ ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಬೋಳಂಬಳ್ಳಿಯ ಧರ್ಮದರ್ಶಿಗಳಾದ ಶ್ರೀ ಧರ್ಮರಾಜ್ ಜೈನ್, ಶ್ರೀಮತಿ ವನಿತಾ ಧರ್ಮರಾಜ್ ಹಾಗೂ ಕುಟುಂಬದ ಸದಸ್ಯರು ಯಶಸ್ವಿಯಾಗಿ ನಡೆಸಿದರು. ಅವರ ಜೊತೆಗೆ ಸ್ಥಳೀಯ ಟ್ರಸ್ಟ್ ಸದಸ್ಯರು, ಧಾರ್ಮಿಕ ಗುರುಗಳು ಹಾಗೂ ಇತರ ಭಕ್ತರು ಕಾರ್ಯಸಾಧನೆಗೆ ಶ್ರಮಿಸಿದರು.
Post a Comment