ಟೀಮ್ ಸಿಂಧೂರ ನೆಲ್ಯಾಡಿ - ಸಮಾಜಮುಖಿ ಸೇವೆಗೆ ಹೊಸ ಅಂಗಳ.

ಭಾರತದ ನೆಲದಲ್ಲಿ ಹುಟ್ಟಿದ ದೇಶಾಭಿಮಾನ, ತ್ಯಾಗ ಮತ್ತು ಶೌರ್ಯದ ಪ್ರತೀಕವಾಗಿ ಉದಯವಾದ ಟೀಮ್ ಸಿಂಧೂರ ನೆಲ್ಯಾಡಿ ಸಂಘಟನೆಯ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಹಮ್ಮಿಕೊಳ್ಳಲಾಗಿತ್ತು.

ಪದಾಧಿಕಾರಿಗಳ ಆಯ್ಕೆ:

ಸಂಚಾಲಕರಾಗಿ - ಶೀನಪ್ಪ ಗೌಡ ಬರಮೇಲು

ಅಧ್ಯಕ್ಷರಾಗಿ - ತಿಮ್ಮಪ್ಪ ಗೌಡ ಬಾಯ್ತ್ರೋಡಿ

ಉಪಾಧ್ಯಕ್ಷರಾಗಿ - ಪುರಂದರ ಗೌಡ ಪಟ್ಟೆಮಜಲು

ಕಾರ್ಯದರ್ಶಿಯಾಗಿ - ಪ್ರಕಾಶ್ ಪೂಜಾರಿ ರಾಮನಗರ
ಅವರುಗಳು ಆಯ್ಕೆಯಾಗಿದ್ದಾರೆ.

ಈ ಸಂಘಟನೆಯ ಮೂಲ ಉದ್ದೇಶಗಳು ಸಮಾಜದಲ್ಲಿ ಸಾಮರಸ್ಯವನ್ನು ಒತ್ತಿಹೇಳುವುದು, ರಾಷ್ಟ್ರಪ್ರೇಮವನ್ನು ಪ್ರೋತ್ಸಾಹಿಸುವುದು ಮತ್ತು ಜಾಗೃತಿಯ ಬೆಳವಣಿಗೆಗೆ ಸ್ಫೂರ್ತಿಯಾಗುವುದು.

ಸಂಘಟನೆಯ ಕಾರ್ಯಕ್ಷೇತ್ರ:

ಅಸ್ಪೃಶ್ಯತೆ ಮುಕ್ತ ಸಮಾಜದ ನಿರ್ಮಾಣ,
ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮಗಳು,
ರಕ್ತದಾನ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸ್ಪಂದಿಸುವುದು,
ಅಸಹಾಯಕರಿಗೆ ಸಹಾಯ,
ರಾಷ್ಟ್ರ ಜಾಗೃತಿಯ ಪ್ರಚೋದನೆ,

ಈ ಸಂಘಟನೆಯ ಮೊದಲ ಹೆಜ್ಜೆಯಾಗಿ, ನೆಲ್ಯಾಡಿ ಗಣೇಶೋತ್ಸವದ ಸಂದರ್ಭದಲ್ಲಿ ಸದಸ್ಯರು ನಿರ್ಮಿಸಿದ ಆರ್ಟಿಕಲ್ ಗನ್ ಸ್ಥಬ್ಧ ಚಿತ್ರ, ಸಾರ್ವಜನಿಕ ಮನಸ್ಸುಗಳನ್ನು ಗೆದ್ದ ಸಾಧನೆಗೆ ಸಾಕ್ಷಿಯಾಗಿದೆ.

ಸಮಾಜ ಸೇವೆಯ ಸಪ್ತಸುರಗಳು:
ಈ ತಂಡವು ಸಾಮಾಜಿಕ ಜವಾಬ್ದಾರಿ, ದೇಶಭಕ್ತಿ ಮತ್ತು ಮಾನವೀಯತೆಯ ತತ್ವಗಳನ್ನು ತನ್ನ ದಿಕ್ಕುಮಾಪಿಯಾಗಿ ತೆಗೆದುಕೊಂಡು ಸಮಾಜಕ್ಕೆ ನಿಜವಾದ ಸೇವೆಯನ್ನು ನೀಡಲು ಬದ್ಧವಾಗಿ ಇದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Post a Comment

Previous Post Next Post