ಸುಬ್ರಹ್ಮಣ್ಯ, ಮೇ 24: ಬಿಳಿನೆಲೆ ಕೈಕಂಬ ಯುವಕ ಮಂಡಲವು ತನ್ನ 50ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡ ಯುವಸೌಧದ ಉದ್ಘಾಟನಾ ಸಮಾರಂಭವು ಮೇ 25, ಭಾನುವಾರ ನಡೆಯಲಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಅವರು ಯುವಸೌಧವನ್ನು ಉದ್ಘಾಟಿಸಲಿದ್ದಾರೆ.
ಸಂಜೆ ಸುವರ್ಣ ಮಹೋತ್ಸವದ ವಿಶೇಷ ಸಭಾ ಕಾರ್ಯಕ್ರಮ ಜರುಗಲಿದ್ದು, ನಂತರ ಪುಟಾಣಿ ವಿದ್ಯಾರ್ಥಿಗಳ ನೃತ್ಯ, ಹಾಡು ಸೇರಿದಂತೆ ಗ್ರಾಮಸ್ಥರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾತ್ರಿ 10 ಗಂಟೆಯಿಂದ ಕುಶಾಲ್ದ ಗುರಿಕಾರಿ ದಿನೇಶ್ ಗೌಡ ಅವರ ಸಾರಥ್ಯದಲ್ಲಿ, ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರೊಂದಿಗೆ ಯಕ್ಷ ಹಾಸ್ಯ ವೈಭವ ನಡೆಯಲಿದ್ದು, ಗ್ರಾಮಸ್ಥರಿಗೆ ಉತ್ತಮ ಮನರಂಜನೆಯೂ ಸಿಕ್ಕಲಿದೆ.
ಸರ್ವರಿಗೂ ಸಂಘಟಕರ ವತಿಯಿಂದ ಹಾರ್ದಿಕ ಸ್ವಾಗತ.
إرسال تعليق