ಕಡಬ, ಮೇ 16: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ನಿವಾಸಿ ಬಾಲಚಂದ್ರ ಗೌಡ (38) ಅವರು ಇಂದು ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. ಪ್ರಸ್ತುತ ಅವರು ಕುಕ್ಕೆ ಸುಬ್ರಹ್ಮಣ್ಯ ದ್ವಾರ ಸಮೀಪ ವ್ಯಾಪಾರ ಮಾಡಿಕೊಂಡಿದ್ದು, ಇತ್ತೀಚೆಗಿನ ದಿನಗಳಲ್ಲಿ ಸಾಮಾಜಿಕವಾಗಿ ಚುರುಕುತನದಿಂದ ಕಾರ್ಯನಿರ್ವಹಿಸುತ್ತಿದ್ದರು.
ಹಿಂದೆ ಅವರು ಕಡಬ ಕಾಲೇಜ್ ರಸ್ತೆಯ ಪ್ರಖ್ಯಾತ ಬೆಸ್ಟ್ ಎಲೆಕ್ಟ್ರಾನಿಕ್ಸ್ ಮತ್ತು ಗುರುಶ್ರೀ ಆಗ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. ತಮ್ಮ ಸುಧೀರ್ಘ ಸೇವಾ ಅವಧಿಯಲ್ಲಿ, ಪ್ರಾಮಾಣಿಕತೆ ಮತ್ತು ಸ್ನೇಹಭಾವದಿಂದ ಅವರು ತಮ್ಮದೇ ಆದ ಹೃದಯಸಂಪತ್ತು ಗಳಿಸಿಕೊಂಡಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಅವರ ಅಕಾಲಿಕ ವಿಯೋಗ ಸ್ಥಳೀಯ ಜನತೆಗೆ ಆಘಾತವನ್ನುಂಟುಮಾಡಿದೆ. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
Post a Comment