ಕೊಂಬಾರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತಾಯವಾಗಿ ವಿವಿಧ ಸರ್ಕಾರಿ ಅನುದಾನಗಳ ಸಹಾಯದಿಂದ ನಿರ್ಮಾಣಗೊಂಡ ಬಹುಪ್ರತೀಕ್ಷಿತ ಕಾಮಗಾರಿಗಳನ್ನು ಇಂದು ಗಣ್ಯಾತಿಥಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಯಿತು.
ಈ ಲೋಕಾರ್ಪಣಾ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ಘನತೆವೆತ್ತ ನ್ಯಾಯಮೂರ್ತಿಗಳು ಶ್ರೀ ರಾಜೇಶ್ ರೈ ಕಲ್ಲಂಗಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಶ್ರೀ ವೈ ಸದಾನಂದ ಪಕ್ಕಳ ಬೈಲೋಳಿ ವಹಿಸಿದ್ದರು.
ಬಿರ್ಮೆರೆ ಗುಂಡಿ ಸೇತು: ₹50 ಲಕ್ಷ ಅನುದಾನದಲ್ಲಿ ನಿರ್ಮಿತ ಸೇತುವೆ.
ಮೆಟ್ಟುತ್ತಾರು ಸೇತು: ₹1 ಕೋಟಿ ಅನುದಾನದಲ್ಲಿ ನಿರ್ಮಿತ ಸೇತುವೆ.
ಸಿರಿಬಾಗಿಲು ಶಾಲೆಯಿಂದ ಪಟ್ಟಣ ರಸ್ತೆಗೆ ಭಾಗಶಃ ಕಾಂಕ್ರೀಟ್ ರಸ್ತೆ ಅಭಿವೃದ್ಧಿ: ₹81.5 ಲಕ್ಷ ಅನುದಾನದಲ್ಲಿ ನಿರ್ಮಾಣ.
ಗೌರವಾತಿಥಿಗಳು:
ಶ್ರೀ ಕೆ.ಎನ್. ಪ್ರವೀಣ್ ಕುಮಾರ್, ವಕೀಲರು, ಹೈಕೋರ್ಟ್ ಬೆಂಗಳೂರು
ಶ್ರೀ ಪ್ರವೀಣ್ ಗೌಡ ಎಚ್.ವಿ., ವಕೀಲರು ಮತ್ತು ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಕೀಲರ ಸಂಘ
ಶ್ರೀ ಎನ್. ಪದ್ಮರಾಜ್ ಗೌಡ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್
ಶ್ರೀ ಪ್ರಮೋದ್ ಕುಮಾರ್ ಕೆ.ಕೆ., ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ
ಗುತ್ತಿಗೆದಾರರಾದ ಶ್ರೀ ಅವಿನಾಶ್ ಮತ್ತು ಶ್ರೀ ಆಲಿ ಕುಞ್ಞ
ಕಾಂಗ್ರೆಸ್ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರೂ ಸುದೀರ್ ಕುಮಾರ್ ಶೆಟ್ಟಿ,
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬಿಲಾಶ.ಪಿ.ಕೆ.ಮಾಜೀ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್ ಮತ್ತಿತರರು ಉಪಸ್ಥಿತರಿದ್ದರು.
ಈ ಕಾಮಗಾರಿಗಳು ನ್ಯಾಯಾಲಯದ ನಿರ್ಧಾರಗಳ ಹಿನ್ನಲೆಯಲ್ಲಿ ಅನುಷ್ಠಾನಗೊಂಡಿರುವುದರಿಂದ, ರಿಟ್ ಅರ್ಜಿದಾರರು — ಗುಣವಂತ ಕಟ್ಟೆ, ಮಂಜುನಾಥ ಕಟ್ಟೆ ಹಾಗೂ ಭುವನೇಶ್ವರ ಅಮ್ಮೂರು ಇವರ ನಿಷ್ಠೆ ಮತ್ತು ಶ್ರಮದ ಫಲವಾಗಿ ಗ್ರಾಮಕ್ಕೆ ಈ ಮಹತ್ವದ ಅಭಿವೃದ್ಧಿ ಸಾಧ್ಯವಾಯಿತು.
ಫಲಾನುಭವಿ ಸಸ್ಮಿತ್ರ ಬಳಗ, ಕೊಂಬಾರು ಅವರ ಸಂಘಟಿತ ಪ್ರಯತ್ನ ಹಾಗೂ ಪ್ರಜಾಸ್ವಾಮಿ ಹಕ್ಕುಗಳ ಸಾರಥ್ಯವು ಈ ಸಾಧನೆಯ ಮೂಲ ಕಾರಣವಾಗಿದೆ.
ಕಾರ್ಯಕ್ರಮದ ಅಂತ್ಯದಲ್ಲಿ ಗ್ರಾಮಸ್ಥರು ಹಾಗೂ ಭಾಗವಹಿಸಿದ ಎಲ್ಲ ಅತಿಥಿಗಳು ಭಾವಪೂರ್ಣ ಧನ್ಯವಾದಗಳನ್ನು ವ್ಯಕ್ತಪಡಿಸಿದರು.
Post a Comment