ನ್ಯಾಯಮೂರ್ತಿ ಅರವಿಂದರವರು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ.

ಕುಕ್ಕೆ ಸುಬ್ರಹ್ಮಣ್ಯ, ಮೇ 15: ಕರ್ನಾಟಕ ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿ ಅರವಿಂದರವರು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವರ ಸಾನ್ನಿಧ್ಯದಲ್ಲಿ ಕಿರುಕ್ಷಣ ಕಳೆಯುತ್ತ ದೇವಾಲಯದ ಪರಿಶುದ್ಧ ವಾತಾವರಣವನ್ನು ಅನುಭವಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನ್ಯಾಯಮೂರ್ತಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಅವರೊಡನೆ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು, ಪವನ್, ಮತ್ತು ಪ್ರಮುಖ ಉದ್ಯಮಿ ಕಿಶೋರ್ ಆರಂಪಾಡಿ, ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Post a Comment

Previous Post Next Post