ಕುಕ್ಕೆ ಸುಬ್ರಹ್ಮಣ್ಯ, ಮೇ 15: ಕರ್ನಾಟಕ ಹೈಕೋರ್ಟ್‌ನ ಮಾನ್ಯ ನ್ಯಾಯಮೂರ್ತಿ ಅರವಿಂದರವರು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವರ ಸಾನ್ನಿಧ್ಯದಲ್ಲಿ ಕಿರುಕ್ಷಣ ಕಳೆಯುತ್ತ ದೇವಾಲಯದ ಪರಿಶುದ್ಧ ವಾತಾವರಣವನ್ನು ಅನುಭವಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನ್ಯಾಯಮೂರ್ತಿಗಳನ್ನು ಶಾಲು ಹೊದಿಸಿ ಗೌರವಿಸಿದರು. ಅವರೊಡನೆ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕೂಜುಗೋಡು, ಪವನ್, ಮತ್ತು ಪ್ರಮುಖ ಉದ್ಯಮಿ ಕಿಶೋರ್ ಆರಂಪಾಡಿ, ಉದ್ಯಮಿ ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.
إرسال تعليق