ಶಾಸಕಿ ನಯನ ಮೋಟಮ್ಮರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭೇಟಿ – ಆತ್ಮೀಯ ಸ್ವಾಗತ, ಭಕ್ತಿಭಾವದ ಪೂಜೆ.

ಕುಕ್ಕೆ ಸುಬ್ರಹ್ಮಣ್ಯ; ಮೇ ,27,ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ಇಂದು ಧಾರ್ಮಿಕ ಪ್ರವಾಸದ ನಿಮಿತ್ತವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಶಾಸಕಿಯವರ ಆಗಮನದ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸದಸ್ಯರು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಆತ್ಮೀಯ ಸ್ವಾಗತದ ಮೂಲಕ ಶಾಸಕಿಯವರ ಪ್ರವಾಸವನ್ನು ಸ್ಮರಣೀಯವನ್ನಾಗಿ ಮಾಡಿದ ವ್ಯವಸ್ಥಾಪನಾ ಸಮಿತಿಯು, ದೇವಾಲಯದ ಸೇವೆ ಹಾಗೂ ಸಂಸ್ಕೃತಿಯ ಬಗ್ಗೆ ಸದಾ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಅಯ್ಯಪ್ಪ ಸೂತಗುಂಡಿ, ಸಮಿತಿಯ ಸದಸ್ಯೆ ಸೌಮ್ಯ ಭರತ್, ಶಾಸಕಿ ಮೋಟಮ್ಮರ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಭಕ್ತರು ಉಪಸ್ಥಿತರಿದ್ದರು.
ಶಾಸಕಿ ಮೋಟಮ್ಮ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಡಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಮಾದರಿಯಾಗಿದೆ. ಇಲ್ಲಿಗೆ ಬರುವುದು ಪ್ರತೀ ಬಾರಿ ಒಂದು ವಿಶಿಷ್ಟ ಅನುಭವ,” ಎಂದು ಹೇಳಿದರು.


Post a Comment

أحدث أقدم