ಇಚಲಂಪಾಡಿಯಲ್ಲಿ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆಯ ನೂತನ ಕಟ್ಟಡದ ಶಂಕು ಸ್ಥಾಪನೆ.

ಕಡಬ: ದ.ಕ ಜಿಲ್ಲೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಇಚಲಂಪಾಡಿಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಕಟ್ಟಡದ ಶಂಕು ಸ್ಥಾಪನಾ ಕಾರ್ಯಕ್ರಮ ಮೇ 24ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಸುಳ್ಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು. ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಗ್ರಾಮೀಣ ಭಾಗದಲ್ಲಿ ಪಶುಸಂಗೋಪನೆ ಮುಖ್ಯ ಆದಾಯ ಸಾಧನವಾಗಿದ್ದು, ಪಶುಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸೇವೆಗಳ ಲಭ್ಯತೆ ಗ್ರಾಮೀಣ ಆರ್ಥಿಕತೆಯು ಬೆಳೆಯಲು ಸಹಕಾರಿಯಾಗಲಿದೆ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷ್ಣ ಶೆಟ್ಟಿ ಕಡಬ, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ, ಭಾಸ್ಕರ್ ಎಸ್. ಗೌಡ, ಸರ್ವೋತ್ತಮ ಗೌಡ, ಪಿ. ಪಿ. ವರ್ಗಿಸ್, ಉಷಾ ಅಂಚನ್, ವಲ್ಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ನೂತನ ಕಟ್ಟಡದ ಮೂಲಕ ಸ್ಥಳೀಯ ಪಶುಪಾಲಕರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ಲಭ್ಯವಾಗಲಿದ್ದು, ಪಶುಗಳ ಆರೈಕೆಯ ಮಟ್ಟ ಹೆಚ್ಚಾಗಲಿದೆ. ಗ್ರಾಮಸ್ಥರು ಈ ಹೆಜ್ಜೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

Post a Comment

أحدث أقدم