ದಿನಾಂಕ: 06-05-2025, ಮಂಗಳವಾರ
ಸಮಯ: ಪೂರ್ವಾಹ್ನ 11:30 ಗಂಟೆಗೆ
ಸಭಾಧ್ಯಕ್ಷತೆ: ಶ್ರೀಮತಿ ಸುಜಾತಾ, ಅಧ್ಯಕ್ಷರು, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳು (ಕಂದಾಯ, ಪೋಲೀಸ್, ಅರಣ್ಯ, ಮೆಸ್ಕಾಂ, ಆರೋಗ್ಯ, ಶಿಕ್ಷಣ), ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಅಧಿಕಾರಿಗಳು, ಶ್ರೀ ಸಂಪುಟ ನರಸಿಂಹಸ್ವಾಮಿ ಮಠ ಪ್ರತಿನಿಧಿಗಳು, ಎಲ್ಲಾ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಧರ್ಮದಾಯ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಮಾಜಮುಖಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು (ಓಂ ಶ್ರೀ ಸಂಜೀವಿನಿ, ಡಾ|| ರವಿ ಕಕ್ಕೇಪದವು ಟ್ರಸ್ಟ್, ರೋಟರಿ, ಲಯನ್ಸ್, ಜೆಸಿಐ, ಸೀನಿಯರ್ ಚೆಂಬರ್, ಎಸ್.ಡಿ.ಎಂ., ನವೋದಯ, ಒಡಿಯೂರು ಸ್ವಸಹಾಯ ಸಂಘಗಳು) ಮುಂತಾದವರು.
ವಿಷಯ:
ಮುಂಬರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳ ವಿರುದ್ಧ ಮುಂಜಾಗೃತಾ ಕ್ರಮ ಕೈಗೊಳ್ಳುವ ಕುರಿತಾಗಿ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣಾ ಸಮಿತಿ ರಚನೆಗಾಗಿ ಈ ತುರ್ತು ಸಭೆ ನಡೆಯಲಿದೆ. ಸಭೆಯಲ್ಲಿ ನಿಮ್ಮ ಸಕ್ರಿಯ ಉಪಸ್ಥಿತಿ ಹಾಗೂ ಅಮೂಲ್ಯ ಸಲಹೆಗಳು ಅತ್ಯಂತ ಅಗತ್ಯವಾಗಿವೆ.
ದಯಮಾಡಿ ಸಭೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕಾಗಿ ಮಾದ್ಯಮ ಮೂಲಕ
ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು,
ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ,
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗ್ರಾಮಸ್ಥರಲ್ಲಿ ವಿನಂತಿಸಿದ್ದಾರೆ.
Post a Comment