ನೆಲ್ಯಾಡಿ-ಕೊಕ್ಕಡ ಮಾರ್ಗ ಬಂದ್: ಬದಲಿ ಮಾರ್ಗ ಮೂಲಕ ಸಂಚಾರಕ್ಕೆ ಸೂಚನೆ.

ನೆಲ್ಯಾಡಿ-ಕೊಕ್ಕಡ ರಸ್ತೆಯ ಪುತ್ಯೆ ಪ್ರದೇಶದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಮಾರ್ಗವನ್ನು ಇಂದಿನಿಂದ ಬಂದ್ ಮಾಡಲಾಗಿದೆ ಎಂದು ಕೌಕ್ರಾಡಿ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.

ರಸ್ತೆ ಬಂದ್ ಹಿನ್ನೆಲೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗಗಳ ಮೂಲಕ ಸಾಗಿಸಲು ಸೂಚನೆ ನೀಡಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ, ಪುತ್ಯೆ ಎಂಬಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೊಕ್ಕಡಕ್ಕೆ ಸಂಚರಿಸುವ ವಾಹನಗಳು ಈಗಿನಿಂದ ನೆಲ್ಯಾಡಿ, ಪಡ್ಡಡ್ಕ, ಹಾರ, ಮಾಯಿಲಕೋಟೆ ಮಾರ್ಗವಾಗಿ ಸಂಚರಿಸಬಹುದು.

ಈ ಕುರಿತು ಮಾಹಿತಿ ನೀಡಿದ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ ಮಾಧ್ಯಮಗಳಿಗೆ ಮಾತನಾಡಿ, ಸಾರ್ವಜನಿಕರು ಸಹಕಾರ ನೀಡುವುದರಿಂದ ಕಾಮಗಾರಿ ಗತಿ ಪಡೆಯಲಿದ್ದು, ಭವಿಷ್ಯದಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

Post a Comment

Previous Post Next Post