ನೆಲ್ಯಾಡಿ: ನೆಲ್ಯಾಡಿ ಗ್ರಾಮದ ರಾಮನಗರದ ಅಮೆತ್ತಿ ಮಾರು ಗುತ್ತು ಮನೆಯಲ್ಲಿ ದಾನಿಗಳ ಸಹಕಾರದೊಂದಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರಗಿತು.
ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಒಂದನೇ ತರಗತಿಯಿಂದ ಪದವಿವರೆಗೆ ನೂರುಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬದ ಸಮಾಜ ಸೇವಕ ಹಾಗೂ ದಾನಿ ಶ್ರೀ ಶ್ರೀಕರ ರೈ ಅಗರಿ ವಹಿಸಿ ಮಾತನಾಡಿದರು:
"ಶಿಕ್ಷಣವೆಂದರೆ ಮಾನವನ ಬೆಳವಣಿಗೆಗೆ ಬುನಾದಿ. ಇಂದಿನ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು, ಇಂತಹ ಕಾರ್ಯಕ್ರಮಗಳು ಶ್ರೇಷ್ಠ ಮಾದರಿಯಾಗುತ್ತವೆ. ಜಾತಿ-ಧರ್ಮವನ್ನು ಮೀರಿ, ಎಲ್ಲ ವಿದ್ಯಾರ್ಥಿಗಳಿಗೆ ಸಮಾನವಾಗಿ ಪ್ರೋತ್ಸಾಹ ನೀಡುವುದು ಶ್ಲಾಘನೀಯ."
ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಶ್ರೀ ರಮೇಶ್ ಗೌಡ ನಾಲ್ಗೊತ್ತು ಅವರು ಭಾಗವಹಿಸಿ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಸಂಚಾಲನೆ ಮಾಡಿದ ನೆಲ್ಯಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಶ್ರೀ ಗಂಗಾಧರ ಶೆಟ್ಟಿ (ಅಮೆತ್ತಿ ಮಾರು ಗುತ್ತು) ಮಾತನಾಡುತ್ತಾ, “ಇದು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ 5ನೇ ವರ್ಷ. ಕಳೆದ ಐದು ವರ್ಷಗಳಿಂದ ನಮ್ಮ ಊರಿನ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಸೇವೆಯನ್ನು ನಿರಂತರವಾಗಿ ನೀಡುತ್ತಿದ್ದೇವೆ. ಮಕ್ಕಳ ಮುಖದಲ್ಲಿ ಕಾಣುವ ಸಂತೋಷವೇ ನಮಗೆ ಸ್ಪೂರ್ತಿ,” ಎಂದು ತಿಳಿಸಿದರು.
ಈ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ದಾನಿಗಳಾಗಿ ಬೆಂಬಲ ನೀಡಿದವರು:
ಶ್ರೀ ಉದಯ್ ಕುಮಾರ್ ಭಟ್ (ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್)
ಶ್ರೀ ಮಹೇಶ್ ಗೌಡ (ಸಿಎ ಬ್ಯಾಂಕ್, ನೆಲ್ಯಾಡಿ)
ಶ್ರೀಕರ ರೈ ಅಗರಿ (ಮಾರ್ದಾಳ, ಕಡಬ)
ಶ್ರೀ ರಮೇಶ್ ಗೌಡ ನಾಲ್ಗೊತ್ತು
ಶ್ರೀ ಗಂಗಾಧರ ಶೆಟ್ಟಿ (ಅಮೆತ್ತಿ ಮಾರು ಗುತ್ತು)
ಸಾರ್ವಜನಿಕರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಇದರ ಲಾಭ ದೊರಕಲಿ ಎಂಬ ಆಶಯವನ್ನು ಸಂಘಟಕರು ವ್ಯಕ್ತಪಡಿಸಿದರು.
إرسال تعليق