ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ: ಮಂಗಳೂರು ಪೊಲೀಸ್ ಇಲಾಖೆಯಿಂದ 5 ಮಂದಿ ಆರೋಪಿಗಳ ಬಂಧನ.

📍 ಮಂಗಳೂರು | 04 ಜೂನ್ 2025
ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿದ್ದ ಪ್ರಕರಣಗಳಲ್ಲಿ ಮಂಗಳೂರು ನಗರ ಪೊಲೀಸ್ ಇಲಾಖೆಯು ಚುರುಕಾಗಿ ಕ್ರಮ ಕೈಗೊಂಡಿದ್ದು, ಐದು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಸುಧೀರ್ ಕುಮಾರ್ ರೆಡ್ಡಿ ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಉಪ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಂ ವಿಭಾಗದ ವಿಶೇಷ ತಂಡಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

ಬಂಧಿತ ಆರೋಪಿಗಳು ಮತ್ತು ಪ್ರಕರಣ ವಿವರಗಳು:

🔹 1. ಮೊಹಮ್ಮದ್ ಅಸ್ಲಾಂ (23)
ವಿಳಾಸ: ಹೆಜಮಾಡಿ, ಉಡುಪಿ | ವಿದೇಶದಿಂದ (ಸೌದಿ ಅರೇಬಿಯಾ) team_jokerzzz._ ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಪ್ರಚೋದನಕಾರಿ ಸಂದೇಶ.
📌 ಪ್ರಕರಣ ಸಂಖ್ಯೆ: 88/2025 | IPC ಕಲಂ: 192, 353(2) | Mangalore South Police Station
📍 LOC ಹೊರಡಿಸಿ ಬಂಧನ

🔹 2. ಚೇತನ್ (20) ಮತ್ತು ನಿತಿನ್ ಅಡಪ (23)
ವಿಳಾಸ: ಕಾಟಿಪಳ್ಳ ಮತ್ತು ಹಳೆಯಂಗಡಿ | team_karna_surathkal ಖಾತೆ ಮೂಲಕ ವಿಕೃತ ಮಾಹಿತಿ ಪ್ರಸಾರ.
📌 ಪ್ರಕರಣ ಸಂಖ್ಯೆ: 58/2025 | IPC ಕಲಂ: 196(1), 353(2) | Mangalore North Police Station
📍 ಇಬ್ಬರೂ ಬಂಧಿತರು

🔹 3. ರಿಯಾಝ್ ಇಬ್ರಾಹಿಂ (30)
ವಿಳಾಸ: ಫರಂಗಿಪೇಟೆ, ಮಂಗಳೂರು | Beary_royal_nawab ಖಾತೆ ಮೂಲಕ ಪ್ರಚೋದನಕಾರಿ ವಿಷಯ | ಸೌದಿಯಿಂದ ಚಟುವಟಿಕೆ
📌 ಪ್ರಕರಣ ಸಂಖ್ಯೆ: 44/2025 (Barke), 42/2025 (Mulki) | IPC ಕಲಂ: 353(1)(c), 353(2)
📍 LOC ಹೊರಡಿಸಿ ಬಂಧನ

🔹 4. ಜಮಾಲ್ ಝಾಕೀರ್ (21)
ವಿಳಾಸ: ಕಸಬಾ ಬೆಂಗ್ರೆ | Troll_bengare_ro_makka ಖಾತೆ ಮೂಲಕ ಪ್ರಚೋದನೆ
📌 ಪ್ರಕರಣ ಸಂಖ್ಯೆ: 44/2025 | IPC ಕಲಂ: 353(1)(c), 353(2) | Mulki Police Station
📍 ಬಂಧನ

🔹 5. ಗುರು ಪ್ರಸಾದ್
ವಿಳಾಸ: ಹಳೆಯಂಗಡಿ | Guru dprasad Haleyangadi ಎಂಬ ಫೇಸ್‌ಬುಕ್ ಖಾತೆ
📌 ಪ್ರಕರಣ ಸಂಖ್ಯೆ: 53/2025 | IPC ಕಲಂ: 196(1)(A), 353(2), 79, 56 | Mulki Police Station
📍 ಬಂಧನ

ಪೊಲೀಸ್ ಇಲಾಖೆಯ ಎಚ್ಚರಿಕೆ:

ಮಂಗಳೂರು ನಗರ ಸಿ.ಇ.ಎನ್. ಪೊಲೀಸ್ ಠಾಣೆಯು ಈ ಎಲ್ಲ ಪ್ರಕರಣಗಳನ್ನು ವಿಶೇಷ ಗಮನದಿಂದ ತನಿಖೆ ನಡೆಸುತ್ತಿದ್ದು, ಸಾರ್ವಜನಿಕ ಶಾಂತಿ ಮತ್ತು ವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಬದ್ಧವಾಗಿದೆ. ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

Previous Post Next Post