ಪುತ್ತೂರು: ಬಜತ್ತೂರು ಗ್ರಾಮದಲ್ಲಿನ ಕುರ್ತಡ್ಕ ನಿವಾಸಿ ಸಂಜೀವ ನಳಿಕೆ (ಕಾಂಚನ) ಅವರ ಮನೆಯ ಬಳಿ ಭೂಕುಸಿತ ಸಂಭವಿಸಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ.
ಪೆರಿಯಡ್ಕದಿಂದ ಅಯೋಧ್ಯಾನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಯ ಹಿಂಭಾಗ ಸಂಪೂರ್ಣವಾಗಿ ಹಾನಿಗೊಂಡಿದೆ. ಮರಗಳು ಬಿದ್ದು ಮಣ್ಣು ಜರಿದುಬಿದ್ದ ಪರಿಣಾಮ ಮನೆಯ ಗೋಡೆಗಳಿಗೆ ಹಾನಿಯಾಗಿರುವ ಸಾಧ್ಯತೆಗಳಿವೆ.
ಈ ಘಟನೆಯಿಂದಾಗಿ ಮನೆ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸಬಹುದೆಂಬ ಶಂಕೆ ವ್ಯಕ್ತವಾಗಿದೆ. ಮನೆಯ ಸದಸ್ಯರು ಈಗ ನೆಲೆಯ ಪಕ್ಕವೇ ಇರುವ ಈ ಅಪಾಯದ ಭಯದ ನೆರಳಲ್ಲಿದ್ದಾರೆ.
ಸ್ಥಳೀಯ ನಾಗರಿಕರು ಹಾಗೂ ಸಾರ್ವಜನಿಕರು ಈ ಪ್ರದೇಶದಲ್ಲಿ ತಕ್ಷಣ ತನಿಖೆ ನಡೆಸಿ ಭದ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವರದಿ: ಬಿ.ಎಸ್. ಪ್ರಸಾದ್.ಜಿ.
ನ್ಯೂಸ್‌ಪ್ಯಾಡ್ ವೆಬ್ ನ್ಯೂಸ್
Post a Comment