ಧರ್ಮಸ್ಥಳ, ಜೂನ್ 13:
ಧರ್ಮಸ್ಥಳದ ಖ್ಯಾತ ಅಡಿಕೆ ವ್ಯಾಪಾರಿಯೊಬ್ಬರಿಗೆ ಲಕ್ಷಾಂತರ ರೂಪಾಯಿಗಳ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕೊಕ್ಕಡ ನಿವಾಸಿ ಅಶ್ರಫ್ ಎಂಬವರು ನೀಡಿರುವ ದೂರಿನಂತೆ, ಸುಮಾರು 15 ವರ್ಷಗಳಿಂದ ಅಡಿಕೆ ವ್ಯಾಪಾರ ನಡೆಸುತ್ತಿರುವ ಅವರು ಈವರ್ಷ ಜನವರಿ 18 ರಂದು ತಮ್ಮ ಗ್ರಾಹಕರಿಂದ ಖರೀದಿಸಿದ ಚಾಲಿ ಅಡಿಕೆ 1,950 ಕಿಲೋಗ್ರಾಂ (ಒಟ್ಟು 30 ಚೀಲ) ಅನ್ನು ನಂಬಿಕೆಯ ಆಧಾರದ ಮೇಲೆ ಮಾರಾಟಕ್ಕೊಪ್ಪಿಸಿದ್ದಾರೆ.
ಪಿರ್ಯಾದಿಯ ಪ್ರಕಾರ, ಭರತ್ ಮಂಜಿಬಾಯಿ ಎಂಬ ವ್ಯಕ್ತಿಯ ಮೂಲಕ ನಿರಾಜ್ ಭವಿಷ್ ಬಾಯಿ ಬೋರ್ಡ್ ಎಂಬವರು ಅಡಿಕೆಯನ್ನು ಖರೀದಿಸಲು ಮುಂದಾಗಿದ್ದು, ಸೌತ್ ಇಂಡಿಯನ್ ಟ್ರಾನ್ಸ್‌ಪೋರ್ಟ್ ನ ಕೆಎ-21ಬಿ-1664 ಸಂಖ್ಯೆಯ ಲಾರಿಗೆ ಅಡಿಕೆ ಲೋಡ್ ಮಾಡಿ ಸಾಗಿಸಲಾಯಿತು. ಮಾರಾಟ ಇನ್ವಾಯ್ಸ್ ಸಹ ಲಗತ್ತಿಸಲಾಯಿತು.
ಖರೀದಿದ ಮೊತ್ತ ರೂ. 6,76,260/- ಪಾವತಿಸುತ್ತೇವೆ ಎಂಬ ಭರವಸೆ ನೀಡಿದ್ದರೂ, ಈವರೆಗೆ ಯಾವುದೇ ಮೊತ್ತ ಪಾವತಿಸದೆ ಪಿರ್ಯಾದಿದಾರರನ್ನು ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 27/2025 ಅಡಿಯಲ್ಲಿ BNSS ಕಾಯ್ದೆಯ ಸೆಕ್ಷನ್ 314, 318(4) R/W 3(5) ರಂತೆ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ. ವ್ಯಾಪಾರಿ ವರ್ಗದಲ್ಲಿ ಈ ಘಟನೆ ಆತಂಕ ಸೃಷ್ಟಿಸಿದೆ.
Post a Comment