ದೇರಾಜೆ ಬಸ್ ನಿಲ್ದಾಣದ ಬಳಿ ಜೀವಾಪಾಯದ ಅಟ್ಟಹಾಸ: ತಲವಾರು ದಾಳಿ ಪ್ರಯತ್ನ – ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು.

ಬಂಟ್ವಾಳ, ಜೂನ್ 13:
ಸಜೀಪಮುನ್ನೂರು ಗ್ರಾಮದ ನಿವಾಸಿ ಉಮರ್ ಫಾರೂಕ್ (48) ಎಂಬವರಿಗೆ ತಲವಾರಿನಿಂದ ದಾಳಿ ಮಾಡಲು ಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯು ಸ್ಥಳೀಯರಲ್ಲಿ ಭಯ ಹಾಗೂ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.

ದೂರುದಾರ ಉಮರ್ ಫಾರೂಕ್ ಅವರು ಜೂನ್ 11 ರಂದು ಮುಂಜಾನೆ ತಮ್ಮ ಜೀಪ್‌ನಲ್ಲಿ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಜೀಪ ನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ವಾಹನದ ಎದುರಿಗೆ ಬಂದಿದ್ದಾರೆ. ಬೈಕ್‌ನ ಹಿಂಬದಿ ಸವಾರನಾಗಿ ಇದ್ದ ವ್ಯಕ್ತಿಯೊಬ್ಬನು ಉಗ್ರತೆಯಿಂದ ತಲವಾರು ಬೀಸಿದ್ದು, ಅದರ ಪರಿಣಾಮವಾಗಿ ಜೀಪ್‌ನ ಸೈಡ್ ಮಿರರ್ ಗಾಜು ಚೂರಾಗಿದೆ.

ಸದ್ಯ ಅಪರಿಚಿತ ಆರೋಪಿಗಳ ಗುರುತು ಪತ್ತೆಯಾಗದಿದ್ದು, ಉಮರ್ ಫಾರೂಕ್ ಅವರು ಜೂನ್ 13ರಂದು ನೀಡಿದ ದೂರಿನ ಮೇಲೆ ಅ.ಕ್ರ. 68/2025ರಂತೆ IPC ಕಲಂ 109, 324(4) ಹಾಗೂ BNS ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.

Post a Comment

Previous Post Next Post