ಬಾಕಿ ಹಣಕ್ಕೆ ತಕರಾರು: ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ದಾಖಲು.

ಬೆಳ್ತಂಗಡಿ: ಟಿಪ್ಪರ್ ಲಾರಿ ಬಾಡಿಗೆ ಹಣಕ್ಕೆ ಸಂಬಂಧಿಸಿದ ವಿವಾದವು ಭಾರೀ ಗಲಾಟೆಯಾಗಿ, ಮಾರಣಾಂತಿಕ ಹಲ್ಲೆಗೆ ಕಾರಣವಾಗಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮ ಬೀಟಿಗೆಯಲ್ಲಿ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಚಿಬಿದ್ರೆ ಗ್ರಾಮವಾಸಿ ಮಹಮ್ಮದ್ ತೌಸಿದ್ ಎಂಬವರು ತಮ್ಮ ಲಾರಿ ಅನ್ನು ಬಾಡಿಗೆಗೆ ನೀಡಿ, ಬಹುಕಾಲದಿಂದ ಬಾಕಿ ಉಳಿದ ಹಣಕ್ಕಾಗಿ ಧೀರವಾಗಿಯೇ ಕೇಳುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಣದ ವಿಚಾರವಾಗಿ ಜೂನ್ 27 ರಂದು ಬೆಳಗ್ಗೆ ಚಾರ್ಮಾಡಿಯಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಪರಸ್ಪರ ವಾಗ್ವಾದವು ಉಂಟಾಗಿ, ಬಳಿಕ ರೋಷ್ಟಕ್ಕೆದ್ದ ವ್ಯಕ್ತಿಗಳು ಹಲ್ಲೆಗೆ ಮುಂದಾದರು ಎಂದು ಮೂಲಗಳು ಹೇಳುತ್ತಿವೆ.

ಪೀಡಿತನ ಹೇಳಿಕೆಯಂತೆ, ಅವರ ಎಡ ಕಣ್ಣಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ನಷ್ಟವಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ. ಘಟನೆಯ ನಂತರ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

 ಧರ್ಮಸ್ಥಳ ಪೊಲೀಸ್ ಠಾಣೆ ಅಕ್ರ 35/2025ಕಲಂ: 352, 115(2), 118(2), 109, 351(2) r/w 3(5) BNS-2023ಯಂತೆ
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Post a Comment

أحدث أقدم