ಬಂಟ್ವಾಳ: ಫರಂಗಿಪೇಟೆ ಪುದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ ಘಟನೆ ದಿನಾಂಕ 26-06-2025ರಂದು ರಾತ್ರಿ ನಡೆದಿದೆ. ಫರಂಗಿಪೇಟೆಯ ನಿವಾಸಿ ಅಜರುದ್ದೀನ್ ಎಂಬವರು ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಜರುದ್ದೀನ್ ಅವರ ದೂರು ಪ್ರಕಾರ, ಒಂದು ತಿಂಗಳ ಹಿಂದೆ ಅವರ ಭಾವ ನಾಸೀರ ಹುಸೈನ್ ಆಟೋ ರಿಕ್ಷಾವೊಂದನ್ನು ಅಶ್ರಫ್ ಆಲಿ ಎಂಬವರಿಗೆ ಮಾರಾಟ ಮಾಡಿದ್ದು, ಅದರ ಹಣ ಬಾಕಿಯಿತ್ತು. ಈ ಹಿನ್ನೆಲೆ ಕೆಲವು ದಿನಗಳ ಹಿಂದೆ ಹಣ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಆರೋಪಿಗಳು ದಿನಾಂಕ 26ರಂದು ರಾತ್ರಿ ಆಟೋ ಹಾಗೂ ಕಾರಿನಲ್ಲಿ ಆಜರುದ್ದೀನ್ ಅವರ ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಾಗ ಎದೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಇನ್ನೊಬ್ಬ ಆರೋಪಿಯಾಗಿರುವ ಕಲೀಲ್ ಎಂಬವರು ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯರ ಬೊಬ್ಬೆ ಕೇಳಿ ಆಗಮಿಸುವ ಸಮಯದಲ್ಲಿ ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡ ಅಜರುದ್ದೀನ್ ಅವರನ್ನು ತಕ್ಷಣ ತುಂಬೆ ಫಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಅಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 90/2025, ಕಲಂ: 352, 115(2), 118(1) ಹಾಗೂ 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
إرسال تعليق