ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರಥಮ ಬೆಳ್ಳಿರಥ ಜೂನ್ 14ರಂದು ನಿರ್ಮಾಣ ಕಾರ್ಯಕ್ರಮಕ್ಕೆ ಭವ್ಯ ಆರಂಭ-ಡಾ.ರೇಣುಕಾ ಪ್ರಸಾದ್ ಅವರಿಂದ ಸೇವೆ.

ಕುಕ್ಕೆ ಸುಬ್ರಹ್ಮಣ್ಯ, ಜೂನ್ 11:
ಶ್ರದ್ಧಾ ಮತ್ತು ಭಕ್ತಿಯ ಪರಂಪರೆ ಉಜ್ವಲಗೊಳಿಸುವ ರೀತಿಯಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬೆಳ್ಳಿಯಿಂದ ರಥ ನಿರ್ಮಾಣ ಕಾರ್ಯಕ್ಕೆ ಭವ್ಯವಾದ ಶುಭಾರಂಭವಾಗಲಿದೆ. ಈ ಮಹತ್ತರ ಧಾರ್ಮಿಕ ಸೇವೆಯನ್ನು ಸುಳ್ಯದ ಕುರಂಜಿ ದಿ,ವೆಂಕಟರಮಣ ಗೌಡ ಅವರ ಪುತ್ರ ಕೆ.ವಿ.ಜಿ ವಿದ್ಯಾಸಂಸ್ಥೆಗಳ ಮಾಲಕ.ಡಾ|ರೇಣುಕಾ ಪ್ರಸಾದ್ ಅವರು ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಬೆಳ್ಳಿರಥವನ್ನು ದೇವರಿಗೆ ಅರ್ಪಿಸುತ್ತಿದ್ದಾರೆ.


ಧಾರ್ಮಿಕ ವಿಧಿ ಮತ್ತು ವಿಶೇಷ ಪೂಜೆ:
ಜೂನ್ 14, ಶನಿವಾರ ಮಧ್ಯಾಹ್ನ, ದೇವಾಲಯದಲ್ಲಿ ಶಾಸ್ತ್ರೋಕ್ತ ವಿಧಿಯಲ್ಲಿ ವಿಶೇಷ ಪೂಜೆ ನೆರವೇರಲಿದೆ. ನಂತರ ರಥ ನಿರ್ಮಾಣಕ್ಕೆ ವೀಳ್ಯ ನೀಡಿ ಕಾರ್ಯಕ್ರಮ ನಡೆಯಲಿದ್ದು, ಭಕ್ತಸಮುದಾಯದ ಸಾನ್ನಿಧ್ಯಕ್ಕೆ ಆಹ್ವಾನಿಸಲಾಗಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರಮುಖರು
:ಮಾಜಿ ಸಚಿವ ರಮಾನಾಥ ರೈ,
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ
ಪುತ್ತೂರು ಶಾಸಕ ಅಶೋಕ್ ರೈ
ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯಾ
ಮಾಜಿ ಪುತ್ತೂರು ಶಾಸಕ ಸಂಜೀವ ಮಠಂದೂರು
ಡಾ. ರೇಣುಕಾ ಪ್ರಸಾದ್ ಹಾಗೂ ಕುಟುಂಬಸ್ಥರು
ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ (ಪಂಚ ಗ್ಯಾರಂಟಿ ಸಮಿತಿ)
ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ
ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ಜಿ
ವ್ಯವಸ್ಥಾಪನಾ ಸಮಿತಿ ಸದಸ್ಯರಾದ, ಸೀತಾರಾಮ ಎಡಪಡಿತ್ತಾಯ ,ಅಶೋಕ್ ನೇಕ್ರಾಜೆ, ಶ್ರೀಮತಿ ಸೌಮ್ಯ ಭರತ್, ಡಾ|ರಘು, ಮಹೇಶ್ ಕುಮಾರ್ ಕರಿಕಳ,ಶ್ರೀಮತಿ ಲೀಲಾ ಮನೋಹರ್,ಶ್ರೀಮತಿ ಪ್ರವೀಣ ರೈ ಮರುವಂಜ, ಅಜಿತ್ ಪಾಲೇರಿ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ
ಎಇಒ ಯೇಸುರಾಜ್
ಮಾಜಿ ಅಧ್ಯಕ್ಷರು ನಿತ್ಯಾನಂದ ಮುಂಡೋಡಿ, ಮೋಹನ್ ರಾಮ್ ಸುಳ್ಳಿ
ರಥಶಿಲ್ಪಿ ರಾಜಗೋಪಾಲ್ ಆಚಾರ್
ನ್ಯಾಯವಾದಿ ವೆಂಕಪ್ಪ ಗೌಡ, ಮಾಸ್ಟರ್ ಪ್ಲಾನ್ ಸದಸ್ಯರಾದ ಅಚ್ಚುತ ಗೌಡ,
ಸತೀಶ್ ಕುಜುಗೊಡು, ಲೋಲಕ್ಷ ಕೈಕಂಬ, ಪವನ್ ಎಂ.ಡಿ ಮತ್ತು ಊರ ಪರ ಊರ ಗಣ್ಯರು

ಷಷ್ಠಿ ಜಾತ್ರೆಗೆ ಪೂರ್ಣಗೊಳ್ಳಲಿದೆ ನಿರ್ಮಾಣ:
ಈ ರಥದ ನಿರ್ಮಾಣ ಕಾರ್ಯ ಮುಂದಿನ ಸುಬ್ರಹ್ಮಣ್ಯ ಷಷ್ಠಿ ಜಾತ್ರೆಗೆ ಮುನ್ನ ಪೂರ್ಣಗೊಳ್ಳಲಿದ್ದು, ಜಾತ್ರೆಯಲ್ಲಿ ಶ್ರೀ ದೇವರು ಈ ರಥದಲ್ಲಿ ರಥೋತ್ಸವ ನಡೆಯಲಿದೆ. ಇದು ಭಕ್ತರಲ್ಲಿ ಭಕ್ತಿ, ಭಾವನೆಯನ್ನು ಇನ್ನಷ್ಟು ಬಲಪಡಿಸಲಿದೆ.

ಆಹ್ವಾನ ಮತ್ತು ಮನವಿ:
ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಲು ಭಕ್ತರನ್ನು ದೇವಾಲಯ ಆಡಳಿತ ಮಂಡಳಿ ಆಹ್ವಾನಿಸಿದ್ದು, ಈ ಭವ್ಯ ಧಾರ್ಮಿಕ ಘಟನೆಯನ್ನು ನೇರವಾಗಿ ಅನುಭವಿಸಲು ಮನವಿ ಮಾಡಿದೆ.

Post a Comment

Previous Post Next Post