ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಶಿವಪ್ರಸಾದ್ ನಿದ್ರೆಯಲ್ಲೇ ವಿಧಿವಶ: ಕುಟುಂಬದವರಿಗೆ ಆಘಾತ!

ಸುಳ್ಯ, ಜೂನ್ 15, 2025 – ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 53 ವರ್ಷದ ಹೆಡ್ ಕಾನ್ಸ್‌ಟೇಬಲ್ ಶಿವಪ್ರಸಾದ್ ಅವರು ನಿದ್ರೆಯಲ್ಲೇ ಹಠಾತ್ ನಿಧನರಾಗಿದ್ದಾರೆ.

ಶಿವಪ್ರಸಾದ್ ಅವರು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕದ ನಿವಾಸಿ. ಅವರು ದಿನಾಂಕ 14ರಂದು ಎಂದಿನಂತೆ ಪೊಲೀಸ್ ಕರ್ತವ್ಯ ಮುಗಿಸಿ ರಾತ್ರಿ ಮನೆಗೆ ಬಂದು ಪತ್ನಿ ಹಾಗೂ ಮಕ್ಕಳೊಂದಿಗೆ ಸಮಯ ಕಳೆಯಿದ್ದರು. ನಂತರ ರಾತ್ರಿ ಸುಮಾರು 11 ಗಂಟೆಗೆ ಎಲ್ಲರೂ ಮಲಗಿದ್ದರು.

ಬೆಳಗಿನ ಜಾವ 5.30ಕ್ಕೆ ಪತ್ನಿ ಸುಲೋಚನಾ ಅವರು ಎದ್ದು ಬಂದು ಶಿವಪ್ರಸಾದ್ ಅವರನ್ನು ಕರ್ತವ್ಯಕ್ಕೆ ಎಬ್ಬಿಸಲು ಯತ್ನಿಸಿದಾಗ ಅವರು ಪ್ರತಿಕ್ರಿಯಿಸದೆ ಮೌನವಾಗಿದ್ದರಿಂದ ಗಾಬರಿಗೊಂಡ ಅವರು ಪಕ್ಕದ ಮನೆಯಲ್ಲಿ ಇರುವ ಶಿವಪ್ರಸಾದ್ ಅವರ ತಂದೆ ತಿಮ್ಮಪ್ಪರವರಿಗೆ ವಿಷಯ ತಿಳಿಸಿದರು.

ತಾತ್ಕಾಲಿಕವಾಗಿ ಮನೆಯವರ ಜೊತೆ ಸೇರಿ ಶೀಘ್ರವೇ ಶಿವಪ್ರಸಾದ್ ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸಾವಿನ ಕಾರಣ ತಿಳಿಯಲು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದೆ.

ಈ ಅಕಾಲಿಕ ಸಾವಿನಿಂದ ಕುಟುಂಬದವರು ಹಾಗೂ ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದು, ಸಹೋದ್ಯೋಗಿಗಳಿಗೂ ದುಃಖದ ಸಂಗತಿಯಾಗಿದೆ.

Post a Comment

Previous Post Next Post