ಕಡಬ ತಾಲೂಕು ಸವಣೂರು ಗ್ರಾಮದ ಇಡ್ಯಾಡಿ ಎಂಬಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಕತ್ತರಿಸಿ ಸಾಗಾಟ ಮಾಡುತ್ತಿದ್ದ ಕಾರ್ಯವನ್ನು ಬೆಳ್ಳಾರೆ ಪೊಲೀಸ್ ಠಾಣೆಯ ಉಪ-ನಿರೀಕ್ಷಕ ಈರಯ್ಯ ಡಿ.ಎನ್. ಅವರ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು ಭೇದಿಸಿದ್ದಾರೆ.
ರಾತ್ರಿ ಸುಮಾರು 7.30ರ ಸುಮಾರಿಗೆ, ಪೊಲೀಸ್ ವಾಹನದನ್ನು ನೋಡಿ ಅನುಮಾನಾಸ್ಪದವಾಗಿ ಓಡಿಹೋದ ವ್ಯಕ್ತಿಯು ಅನ್ಯಾಡಿಯ ಸುಲೈಮಾನ್ ಎಂದು ಗುರುತಿಸಲಾಗಿದೆ. ಆರೋಪಿಯು ಪರವಾನಿಗೆ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಕತ್ತರಿಸಿ ಮಾರಾಟಕ್ಕೆ ಸಾಗಿಸುತ್ತಿದ್ದನೆಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಎರಡು ಲಾರಿಗಳನ್ನು ಪತ್ತೆಹಚ್ಚಿದ್ದಾರೆ.
ಪತ್ತೆಯಾದ ಲಾರಿ ವಿವರಗಳು:
KA 21 A 4150: ಈ ಲಾರಿಯ ಮೌಲ್ಯ ₹7,50,000 ಮತ್ತು ಭರ್ತಿಯಾಗಿದ್ದ ಕೆಂಪು ಕಲ್ಲಿನ ಮೌಲ್ಯ ₹15,000
KL 57 B 3314: ಈ ಲಾರಿಯ ಮೌಲ್ಯ ₹7,50,000 ಮತ್ತು ಅದರಲ್ಲಿದ್ದ ಕೆಂಪು ಕಲ್ಲಿನ ಮೌಲ್ಯ ₹15,000
ಇದಲ್ಲದೆ ಸ್ಥಳದಲ್ಲಿಯೇ ಕೆಂಪು ಕಲ್ಲನ್ನು ಕತ್ತರಿಸಲು ಬಳಸುತ್ತಿದ್ದ ಯಂತ್ರವೊಂದೂ ಪತ್ತೆಯಾಗಿದೆ. ಇದರ ಮೌಲ್ಯ ₹1,00,000 ಆಗಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ.
ಪಂಚಾಯತ್ ಪ್ರತಿನಿಧಿಗಳ ಸಮಕ್ಷಮದಲ್ಲಿ ಮಹಜರು ರೂಪಿಸಿ ಎಲ್ಲಾ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 27/2025 ರಂತೆ ಕೆಳಕಂಡ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ:
ಕರ್ನಾಟಕ ಮೈನರ್ ಮಿನರಲ್ ಕನ್ಸೆಸನ್ ನಿಯಮಗಳು, 1994: ಸೆಕ್ಷನ್ 42, 43, 44
ಎಂ.ಎಂ.ಆರ್.ಡಿ. ಕಾಯ್ದೆ 1957: ಸೆಕ್ಷನ್ 4(1), 4(1ಎ), 21(1), 21(1ಎ)
ಭಾರತೀಯ ದಂಡ ಸಂಹಿತೆ (BNS) 2023: ಸೆಕ್ಷನ್ 303(2)(ಬಿ)
ಪೊಲೀಸರು ಆರೋಪಿ ಸುಲೈಮಾನ್ ಎಂಬಾತನ ಪತ್ತೆಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧದ ಈ ಕ್ರಮಕ್ಕೆ ಸ್ಥಳೀಯರ ದಿಂದ ಮೆಚ್ಚುಗೆ ವ್ಯಕ್ತವಾಗಿದೆ.
Post a Comment