🛑 ಎಚ್ಚರಿಕೆ! ಸೈಬರ್ ಅಪರಾಧಿಗಳಿಂದ ಹೂಡಿಕೆ ಮೋಸ – ನಿಮ್ಮ ಹಣದ ಚೀಲವನ್ನು ರಕ್ಷಿಸಿಕೊಳ್ಳಿ 🛑

ಮಂಗಳೂರು, ಜೂನ್ 28:
ಸೈಬರ್ ಅಪರಾಧಿಗಳಿಂದ ಹೂಡಿಕೆದಾರರನ್ನು ಗುರಿಯಾಗಿಸಿ ಬಹುಮಾನೀಯ ಲಾಭದ ಆಮಿಷವನ್ನೊಳಗೊಂಡ ನಕಲಿ ಹೂಡಿಕೆ ಪ್ರಸ್ತಾವನೆಗಳ ಮೂಲಕ ಲಕ್ಷಾಂತರ ರೂ. ಗಳ ಮೋಸ ನಡೆಯುತ್ತಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಾದ ಸುದೀರ್ ಕುಮಾರ್ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ಹೂಡಿಕೆ ಮೋಸ ಎಂದರೇನು?

ಸೈಬರ್ ಅಪರಾಧಿಗಳು ನಕಲಿ ವೆಬ್‌ಸೈಟುಗಳು, ಫೇಸ್ಬುಕ್/ಇನ್ಸ್ಟಾಗ್ರಾಂ ಜಾಹೀರಾತುಗಳು, ವಾಟ್ಸಾಪ್/ಟೆಲಿಗ್ರಾಂ ಗುಂಪುಗಳು, ನಕಲಿ ಸೆಲೆಬ್ರಿಟಿ ಚಿತ್ರಗಳು ಮತ್ತು ನಂಬಿಕೆ ಮೂಡಿಸುವ ಸ್ಟ್ರೀನ್‌ಶಾಟ್‌ಗಳ ಮೂಲಕ ನಕಲಿ ಹೂಡಿಕೆ ಯೋಜನೆಗಳನ್ನು ಪ್ರಚಾರ ಮಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಭರವಸೆ ನೀಡುತ್ತಾರೆ. ಆದರೆ, ಹಣ ಹೂಡಿದ ಮೇಲೆ ಯಾವುದೇ ಲಾಭ ದೊರೆಯದೆ ಹಣವೇ ಕಣ್ಮರೆಯಾಗುತ್ತದೆ.

---
ಸಾಮಾನ್ಯ ಎಚ್ಚರಿಕೆ ಸಂಕೇತಗಳು:

"ಖಚಿತ ಲಾಭ" ಅಥವಾ "ಹಣದ ದ್ವಿಗುಣ/ತ್ರಿಗುಣ" ಭರವಸೆ

ತಕ್ಷಣ ಹಣ ಹಾಕಬೇಕೆಂದು ಒತ್ತಡ

ನೋಂದಾಯಿಸದ ಕಂಪನಿಗಳು/ಏಜೆಂಟ್‌ಗಳು

ಯುಪಿಐ/ಕ್ರಿಪ್ಟೋ ಪಾವತಿಗೆ ಒತ್ತಾಯ

ನಕಲಿ ಲಾಭದ ಸ್ಟ್ರೀನ್‌ಶಾಟ್‌ಗಳು

---
ನಿಜವಾದ ಪ್ರಕರಣಗಳು:
📍 ಸುರತ್ಕಲ್, ಮಂಗಳೂರು: ವಾಟ್ಸಾಪ್ ಗುಂಪು ಮೂಲಕ Crypto Trading ನಲ್ಲಿ ₹1.57 ಕೋಟಿ ಹೂಡಿಕೆ ಮಾಡಿ ಮೋಸ
📍 ಕೆಪಿಟಿ, ಮಂಗಳೂರು: ಶೇರು ತರಬೇತಿಯ ವಾಟ್ಸಾಪ್ ಗ್ರೂಪಿಂದ ₹37.49 ಲಕ್ಷ ಹೂಡಿಕೆ
📍 ಪಂಜಿಮೊಗರು: "Work from Home" ಜಾಹೀರಾತು ನೋಡಿ ₹27.01 ಲಕ್ಷ ವಂಚನೆ
📍 ಕಂಕನಾಡಿ: Facebook ಜಾಹೀರಾತು ಮೂಲಕ ₹30.55 ಲಕ್ಷ ಹೂಡಿಕೆ ಮೋಸ
📍 ಉರ್ವಾ: Telegram crypto ಗ್ರೂಪಿನಿಂದ ₹13.57 ಲಕ್ಷ ವಂಚನೆ
---
ಪೊಲೀಸರ ಎಚ್ಚರಿಕೆ:

"ಸಾಮಾಜಿಕ ಜಾಲತಾಣಗಳಲ್ಲಿ ಬರುವ ಆಮಿಷಗಳಿಗೆ ಬಲಿಯಾಗಬೇಡಿ. ದುಡ್ಡಿನ ವಿಷಯದಲ್ಲಿ ಜಾಗೃತರಾಗಿರಿ. ಯಾವುದೇ ಹಣಕಾಸು ಹೂಡಿಕೆಗೆ ಮೊದಲು ಅಧಿಕಾರಿಕ ಮಾಹಿತಿ ಪರಿಶೀಲಿಸಿ."
— ಪೋಲಿಸ್ ಆಯುಕ್ತ ಸುದೀರ್ ಕುಮಾರ್ ರೆಡ್ಡಿ

---
ಜನತೆಗೆ ಸಲಹೆ:

ಯಾವ ಹೂಡಿಕೆಯಾದರೂ ಮಾಡೋ ಮೊದಲು SEBI ಅಥವಾ RBI ಅಧಿಕೃತ ನೊಂದಾಯಿತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಿ

ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ

ಶಂಕಾಸ್ಪದ ಆಫರ್ ಬಂದರೆ ಸ್ಥಳೀಯ ಪೋಲಿಸ್ ಠಾಣೆಗೆ ಅಥವಾ ಸೈಬರ್ ಕ್ರೈಮ್ ಸೆಲ್‌ಗೆ ತಿಳಿಸಿ

"Too good to be true" ಅನ್ನಿಸುವ ಯಾವುದೇ ಆಫರ್‌ಗಳ ಬಗ್ಗೆ ಎರಡು ಬಾರಿ ಯೋಚಿಸಿ
---
ನಿಮ್ಮ ಹಣ, ನಿಮ್ಮ ಹೊಣೆ. ಸೈಬರ್ ಜಗತ್ತಿನಲ್ಲಿ ಬುದ್ಧಿವಂತಿಕೆ ನಿಮ್ಮ ಭದ್ರತೆ.

📰 newspad ತಂಡದಿಂದ – ನಿಮ್ಮ ವಿಶ್ವಾಸಾರ್ಹ ಸುದ್ದಿ ಮೂಲ.

Post a Comment

Previous Post Next Post