ಬೆಳ್ತಂಗಡಿ, ಜೂನ್ 17 – ಬೆಳ್ತಂಗಡಿ ತಾಲೂಕು ಓಡಿಲ್ನಾಳ ಗ್ರಾಮದ ಪಣೆಜಾಲು ಎಂಬಲ್ಲಿ ಅಕ್ರಮ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಯಲ್ಲಪ್ಪ ಹೆಚ್. ಮಾದರ ಅವರು, ಬೆಳ್ತಂಗಡಿ ಠಾಣೆಯ ಉಪನಿರೀಕ್ಷಕರ ನೇತೃತ್ವದಲ್ಲಿ ಪೊಲೀಸರ ತಂಡದೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದು, ಅಪಾದಿತರನ್ನು ಬಂಧಿಸಲಾಗಿದೆ.
ದಾಳಿಯ ವೇಳೆ ಯಾವುದೇ ಕಾನೂನುಬದ್ಧ ಪರವಾನಿಗೆ ಇಲ್ಲದೆ, ವಾಸ್ತವ್ಯದ ಮನೆಯೊಳಗೆ ಹಣ ಪಣವಾಗಿಟ್ಟುಕೊಂಡು ಇಸ್ಪಿಟ್ ಎಲೆಗಳಿಂದ “ಉಲಾಯಿ–ಪಿದಾಯಿ” ಎಂಬ ಜುಗಾರಿ ಆಟ ಆಡುತ್ತಿದ್ದ ಆರು ಮಂದಿ ಬಂಧನಕ್ಕೊಳಗಾಗಿದ್ದಾರೆ.
ಪೊಲೀಸರು ಸ್ವಾಧೀನಪಡಿಸಿಕೊಂಡ ವಸ್ತುಗಳು:
ನಗದು ರೂ. 26,770
ಇಸ್ಪಿಟ್ ಎಲೆಗಳು
ಮೊಬೈಲ್ ಫೋನ್‌ಗಳು – 6
ಆಟೋ ರಿಕ್ಷಾ – 1
ಮೋಟಾರು ಬೈಕುಗಳು – 2
ಜುಗಾರಿಗೆ ಬಳಸಿದ ಚಾಪೆ
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 48/2025, ಕರ್ನಾಟಕ ಪೊಲೀಸು ಕಾಯ್ದೆ 1963ರ ಕಲಂ 78 ಮತ್ತು 80, ಹಾಗೂ BNS 2023ರ ಕಲಂ 112(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.
Post a Comment