ವಿಟ್ಲ:
ದಿನಾಂಕ 04.11.2015ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ 2015ರಲ್ಲಿ ದಾಖಲಾದ ವಿಟ್ಲ ಪೊಲೀಸ್ ಠಾಣೆ ಅಕ್ರ 218/2015 ಕಲಂ: 448, 341, 323, 376(G), 506, 34 ಭಾದಂಸಂ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಬಹು ವರ್ಷಗಳಿಂದ ಪರಾರಿಯಾಗಿದ್ದನು.
ಬಿಹಾರ ರಾಜ್ಯದ ಪಾಟ್ನಾ ಜಿಲ್ಲೆಗೆ ಸೇರಿರುವ ಬಬ್ಲೂ ಕುಮಾರ್ ಎಂಬಾತನು ಪ್ರಕರಣ ದಾಖಲಾಗಿದ ನಂತರ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನ ಪತ್ತೆ ಹಚ್ಚಲು ವಿಟ್ಲ ಠಾಣಾ ಪೊಲೀಸರು ಹರಸಾಹಸಪಟ್ಟಿದ್ದು, ನಿಖರ ಮಾಹಿತಿಯ ಆಧಾರದ ಮೇಲೆ ದಿನಾಂಕ 13-07-2025ರಂದು ಪಟ್ನಾ ಜಿಲ್ಲೆಯ ಬೀಟಾ ಎಂಬ ಪ್ರದೇಶದಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು.
ಆಮೇಲೆ ಆರೋಪಿಯನ್ನು ಕಾನೂನು ಪ್ರಕ್ರಿಯೆಯಂತೆ ವಿಟ್ಲಕ್ಕೆ ಕರೆತರಲಾಗಿದ್ದು, ಇದೇ ದಿನ ಮಾನ್ಯ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ.
ಈ ಪ್ರಕರಣದ ಪರಿಶೀಲನೆ ನಡೆಸಿದ ವಿಟ್ಲ ಠಾಣೆಯ ಪೊಲೀಸರು, ಪರಾರಿಯಾಗಿದ್ದ ಆರೋಪಿಯನ್ನು ದೀರ್ಘ ಅನ್ವೇಷಣೆಯ ಬಳಿಕ ಬಂಧಿಸಿ ನ್ಯಾಯಾಲಯದ ಮುಂದೆ ಒಪ್ಪಿಸಿರುವುದು ಸಾರ್ವಜನಿಕ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
Post a Comment