ಬೆಳ್ತಂಗಡಿ, ಜುಲೈ 11, 2025: ಧರ್ಮಸ್ಥಳದ ಧಾರ್ಮಿಕ ಕೇಂದ್ರ ಮತ್ತು ಅದರ ಸಂಬಂಧಿತ ವ್ಯಕ್ತಿಗಳ ವಿರುದ್ಧ ಫೇಸ್ಬುಕ್‌ನಲ್ಲಿ ಅಶ್ಲೀಲ ಭಾವಚಿತ್ರ ಹಾಗೂ ಸಂದೇಶ ಹರಡಿದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಪ್ರಕರಣದ ಕುರಿತು ಧರ್ಮಸ್ಥಳ ಗ್ರಾಮದ ನಿವಾಸಿ ಚೇತನ್ ಎನ್ (28) ಎಂಬವರು ನೀಡಿದ ದೂರಿನಂತೆ, ಅವರು ತಮ್ಮ ಮೊಬೈಲ್ ಮೂಲಕ ಫೇಸ್ಬುಕ್ ಪರಿಶೀಲಿಸುತ್ತಿದ್ದಾಗ, ಡಾಕ್ಟರ್ ವರ್ಮಾ ಎಂಬ ಹೆಸರಿನ ಖಾತೆಯಲ್ಲಿ ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಭಾವಚಿತ್ರವನ್ನು ಅಶ್ಲೀಲ ರೀತಿಯಲ್ಲಿ ಆವೃತ್ತಿ ಮಾಡಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ರೀತಿಯ ಸಂದೇಶವನ್ನೂ ಪೋಸ್ಟ್ ಮಾಡಲಾಗಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಚೇತನ್ ಎನ್ ಅವರ ದೂರುದಾಳ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕ್ರ.ಸಂ. 59/2025, ಭಾರತೀಯ ದಂಡ ಸಂಹಿತೆ (BNS) 2023ರ ಕಲಂ 296ರಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದು, ಆರೋಪಿಯನ್ನು ಗುರುತಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.
Post a Comment