ಬಂಟ್ವಾಳ, ಜುಲೈ 15:
ವಕೀಲರ ಗೌರವಕ್ಕೆ ಧಕ್ಕೆಯಾದ ಹೇಳಿಕೆ ಹಾಗೂ ನಂತರದ ಮಾನಹಾನಿಕರ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ನವೀನ್ ಗೌಡ ಎಂಬ ವ್ಯಕ್ತಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿದೆ.
ಪ್ರಕರಣದ ಪಿರ್ಯಾದಿದಾರರಾದ ಮಂಗಳೂರಿನ ಮಂಗಳಪದವು ನಿವಾಸಿ, ವಕೀಲ ಶಿವಾನಂದ ಎಂ.ವಿ. (ವಯಸ್ಸು 34), ತಮ್ಮ ಫೇಸ್‌ಬುಕ್ ಖಾತೆಯನ್ನು ದಿನಾಂಕ 24 ಜೂನ್ 2025ರಂದು ಪರಿಶೀಲಿಸುತ್ತಿದ್ದ ವೇಳೆ ನವೀನ್ ಗೌಡ ಎಂಬಾತ ತನ್ನ ಫೇಸ್‌ಬುಕ್ ಖಾತೆಯಲ್ಲಿ ವಕೀಲ ಸಮುದಾಯದ ಬಗ್ಗೆ ಕೀಳು ಮಟ್ಟದ ಶಬ್ದಗಳನ್ನು ಬಳಸಿದ್ದನ್ನು ಕಂಡು, ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 76/2025, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂಗಳು 351(2), 352, 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಲ್ಲದೇ, ದಿನಾಂಕ 26 ಜೂನ್ 2025 ರಂದು ಇದೇ ಪಿರ್ಯಾದಿದಾರರು ನೀಡಿದ ದೂರಿನ ಕುರಿತ ಮಾಧ್ಯಮ ವರದಿಯನ್ನು ನವೀನ್ ಗೌಡ ಮತ್ತೆ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿ, ಶಿವಾನಂದ ಎಂ.ವಿ. ಅವರ ವಿರುದ್ಧ ನಿಂದನ್ಮಾತಕ ಶಬ್ದಗಳನ್ನು ಬಳಸಿ ಮಾನಹಾನಿಕರ ಪೋಸ್ಟ್ ಮಾಡಿರುವುದಾಗಿ ದೂರು ನೀಡಲಾಗಿದೆ.
ಈ ಬಗ್ಗೆ ಮತ್ತೊಂದು ಪ್ರಕರಣವನ್ನು ಪೊಲೀಸರು ದಾಖಲಿಸಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 77/2025, BNS 2023ರ ಕಲಂಗಳು 351(2), 352, 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಎರಡೂ ಪ್ರಕರಣಗಳ ತನಿಖೆ ಮುಂದುವರೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಗೌರವಕ್ಕೆ ಧಕ್ಕೆಯಾದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವು ಚರ್ಚೆಗೆ ಗ್ರಾಸವಾಗುತ್ತಿದೆ.
Post a Comment