🚌 ಬೊಳುಬೈಲಿನಲ್ಲಿ ನವಚೇತನ ಬಸ್ ತಂಗುದಾಣ ಉದ್ಘಾಟನೆ - ಗ್ರಾಮದ ಯುವಕರ ಶ್ರಮದಿಂದ ನಿರ್ಮಾಣ.


ಜಾಲ್ಸೂರು, ಜುಲೈ 13:
ಗ್ರಾಮದ ಯುವ ಸಮೂಹ ಸಮಾಜಮುಖಿಯಾಗಿ ಕೆಲಸ ಮಾಡುತ್ತಾ ಸಾಗಿದರೆ ಗ್ರಾಮಗಳ ಅಭಿವೃದ್ಧಿ ಸುಲಭವಾಗಿ ಸಾಧ್ಯವಾಗುತ್ತದೆ ಎಂದು ಜಾಲ್ಸೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಗೋಪಾಲ್ ಅಡ್ಕಾರು ಅಭಿಪ್ರಾಯಪಟ್ಟರು.

ಅವರು ಬೊಳುಬೈಲು ನವಚೇತನ ಯುವಕ ಮಂಡಲದ ಸಹಭಾಗಿತ್ವದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ಬಸ್ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. “ಯುವಕರ ಶ್ರಮದ ಫಲವಾಗಿ ಈಂತಹ ಸಾರ್ವಜನಿಕ ಸೌಕರ್ಯ ನಿರ್ಮಾಣವಾಗಿರುವುದು ಶ್ಲಾಘನೀಯ” ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಗೋಪಿನಾಥ್ ಬಸ್ಸು ತಂಗುದಾಣ ನಿರ್ಮಾಣದ ಹಿಂದಿನ ಶ್ರಮದ ಹಾಗೂ ಯೋಜನೆಯ ವಿವರಗಳನ್ನು ತಿಳಿಸಿದರು. ಸದಸ್ಯೆ ಶ್ರೀಮತಿ ಗೀತಾ ಚಂದ್ರಹಾಸ, ಕನಕಮಜಲು ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಅರ್ಭಡ್ಕ ಮತ್ತು ನಿರಂಜನ ಬೊಳುಬೈಲು ಸಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನವಚೇತನ ಯುವಕ ಮಂಡಲದ ಅಧ್ಯಕ್ಷ ಶ್ರೀ ಪ್ರದೀಪ್ ಬೊಳುಬೈಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಡಲದ ಪೂರ್ವಾಧ್ಯಕ್ಷರಾದ ಪದ್ಮನಾಭ ನೆಕ್ರಾಜೆ ಸ್ವಾಗತಿಸಿ, ನಿತಿನ್ ಕುಮಾರ್ ಅರ್ಭಡ್ಕ ವಂದಿಸಿದರು. ನಿರೂಪಣೆಯನ್ನು ಪ್ರವೀಣ್ ಕಾಟೂರು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಯುವಕ ಮಂಡಲದ ಹಲವರು, ಊರಿನ ಪ್ರಮುಖರು, ಬಂದುಬಳಗದವರು ಉಪಸ್ಥಿತರಿದ್ದರು.

Post a Comment

Previous Post Next Post