*ನಿಮಗೆಷ್ಟು ಮುಖವಾಡ, ಗ್ಯಾರಂಟಿ ಅಗತ್ಯ ಇಲ್ಲದಿದ್ದರೆ ರಿಜೆಕ್ಟ್ ಮಾಡಿ*
.
*ಸುಬ್ರಹ್ಮಣ್ಯದಲ್ಲಿ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ*
ಮರಳು ಮಾಫಿಯಾ ನಡೆಸಿದ ವೆಂಕಟ್ ವಳಲಂಬೆ ಅವರೇ ಈಗ ಮರಳು ಮಾಫಿಯಾ ಬಗ್ಗೆ ಮಾತನಾಡುತಿದ್ದಾರೆ. ಪುತ್ತೂರು,
ಸುಳ್ಯದಲ್ಲಿ ಎಷ್ಟು ಜನ ಲೈಸೆನ್ಸ್ ಪಡೆದು ಮರಳುಗಾರಿಕೆ ನಡೆಸುತ್ತಿದ್ದಾರೆ, ಎಷ್ಟು ಕೆಂಪು ಕಲ್ಲು ಯಾರ್ಡ್ ಇದೆ ಎಂದು ನಿಮಗೆ ಗೊತ್ತಿದೆಯಾ ಎಂದು ಕಡಬ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಅವರು ಸುಬ್ರಹ್ಮಣ್ಯದಲ್ಲಿ ಜು. 15 ರಂದು ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.
ಜೂ.5 ರಿಂದ ಅಕ್ಟೋಬರ್ ತನಕ ಮಳೆಗಾಲ ಮರಳುಗಾರಿಕೆಗೆ ಅನುಮತಿ ಇಲ್ಲ. ಹಾಗಿದ್ದರೂ ತಪ್ಪು ಮಾಹಿತಿ ಕೊಡುತಿದ್ದಾರೆ.
30 ವರ್ಷಗಳಿಂದ ಬಿಜೆಪಿ ಶಾಸಕರಿದ್ದಾರೆ, ಸಂಸದರಿದ್ದಾರೆ ನಿವ್ಯಾಕೆ ಮರಳು ನೀತಿ ರೂಪಿಸಿಲ್ಲ ಎಂದ ಅವರು ದ.ಕ ಜಿಲ್ಲೆಯಲ್ಲಿ ಶಾಂತಿ ತರಳು ಆಡಳಿತ ಪಕ್ಷ ಪಯತ್ನಿಸಿದರೆ ಇವರು ಅಶಾಂತಿ ಉಂಟು ಮಾಡಲು ಪಯತ್ನಿಸುತಿದ್ದಾರೆ. ಗ್ಯಾರಂಟಿ ಬಗ್ಗೆ ಟೀಕಿಸುವ ನೀವು ಪ್ರತಿಭಟಿಸಿದವರು ಅದರ ಅಗತ್ಯ ಇಲ್ಲದಿದ್ದರೆ ಹಿಂತಿರುಗಿಸಿ ಎಂದರು. ಕಪ್ಪು ಹಣ ತಂದು ಹಂಚುತ್ತೇವೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಅಧಿಕಾರಕ್ಕೆ ಬಂದ ನೀವು ಅದಕ್ಕಾಗಿ ಏನು ಮಾಡಿದಿರಿ ಎಂದು ಕೇಳಿದರು.. ಅಶೋಕ್ ರೈಯನ್ನು ಸುಳ್ಯದ ಅಭಿವೃದ್ಧಿಗಾಗಿ ತರುತ್ತೇವೆ ತಾಕತಿದ್ದರೆ ದಿಗ್ಬಂಧನ ಹಾಕಿ ಎಂದರು. ಮಠಂದೂರು, ನಳಿನ್ ಕುಮಾರ್ ಕಟೀಲ್ ಪುತ್ತೂರಿನಲ್ಲಿ ಏನು ಕೆಲಸ ಮಾಡಿದ್ದಾರೆ, ಅಶೋಕ್ ರೈ ಏನು ಕೆಲಸ ಮಾಡಿದ್ದಾರೆ ಎಂದು ನಾವು ತೋರಿಸುತ್ತೇವೆ ಬನ್ನಿ ಸವಾಲೆಸದರು. ವೆಂಕಟ್ ಅವರು ಸಂಜೆ ಮದ್ಯಪಾನ ಮಾಡಲು ಹೇಳ್ತಾರೆ, ಒಂದು ಕಡೆ ಬಾರ್ ತೆರೆವುದನ್ನು ತಡೆಯಲು ಬರ್ತಾರೆ, ಮತ್ತೊಂದು ಕಡೆ ಬಾರ್ ಉದ್ಘಾಟನೆಗೆ ಹೋಗುತ್ತಾರೆ ನಿಮಗೆ ಎಷ್ಟು ಮುಖ ಎಂದು ಅವರು ಕೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ನ ಖಜಾಂಜಿ ಕಿಶೋರ್ ಅರಂಪಾಡಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಡಬ ತಾಲ್ಲೂಕು ಅಧ್ಯಕ್ಷ ಗೋಪಾಲ ಎಣ್ಣೆಮಜಲು,
ಕಡಬ ಬ್ಲಾಕ್ ಕಾಂಗ್ರೆಸ್ ನ ಕಾರ್ಯದರ್ಶಿ ಮೋಹನ್ ದಾಸ್ ರೈ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಉಪಸ್ಥಿತರಿದ್ದರು.
Post a Comment