ಬೆಳ್ತಂಗಡಿ, ಜುಲೈ 11 (newspad):
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳೀಯ ದಿನಸಿ ಅಂಗಡಿಗೆ ಉದ್ದೇಶಿತವಾಗಿ ಬೆಂಕಿ ಹಚ್ಚಿದ ಆರೋಪಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಯ ಕುರಿತಂತೆ ಕೊಡಲಾದ ಮಾಹಿತಿಯಂತೆ, ಅಂಗಡಿ ಮಾಲೀಕರಾದ ಸದಕುತುಲ್ಲ (ವಯಸ್ಸು 50), ದಿನಾಂಕ 09-07-2025 ರಂದು ತಮ್ಮ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಆದರೆ 10-07-2025 ಬೆಳಿಗ್ಗೆ, ಆರೋಪಿತ ಉಮೇಶ್ ಬಂಗೇರ ಎಂಬಾತನು ಅಂಗಡಿಗೆ ಬೆಂಕಿ ಹಚ್ಚಿದ್ದಾನೆ ಎಂಬ ಮಾಹಿತಿ ಪಿರ್ಯಾದಿದಾರರಿಗೆ ಲಭಿಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳಿಯರ ಸಹಾಯದಿಂದ ಬೆಂಕಿ ನಂದಿಸಲಾಯಿತು.
ಈ ಬೆಂಕಿಯಿಂದ ಅಂಗಡಿಗೆ ಅಳವಡಿಸಲಾಗಿದ್ದ 2 ಫ್ಲೆಕ್ಸ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಜೊತೆಗೆ 10 ಪ್ಲಾಸ್ಟಿಕ್ ಉಪ್ಪಿನ ಚೀಲಗಳು ಹಾನಿಗೊಳಗಾಗಿವೆ. ಇದರಿಂದ ಸುಮಾರು ₹3000 ನಷ್ಟ ಉಂಟಾಗಿದೆ.
ಆರೋಪಿತನು ಅಂಗಡಿಯಲ್ಲಿ ಖರೀದಿಸಿದ ವಸ್ತುಗಳ ಹಣ ಪಾವತಿಸದೆ ಬಾಕಿಯಾಗಿದ್ದು, ಅದನ್ನು ಮಾಲೀಕರಾದ ಸದಕುತುಲ್ಲ ಕೇಳಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದನೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಸಂಬಂಧಿತ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 56/2025, ಭಾರತೀಯ ನ್ಯಾಯ ಸಂಹಿತೆಯ ಕಲಂ 326(f), 324(2) ಬಿಎನ್‌ಎಸ್ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ನಡೆಸಲಾಗಿದ್ದು, ಆರೋಪಿತನನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ.
Post a Comment