ಕಡಬ, ಜುಲೈ 22: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕಡಬ ಮತ್ತು ಜಾನುವಾರು ತಳಿ ಸಂವರ್ಧನಾ ಕೇಂದ್ರ, ಕೊಯಿಲಾ ಇವರ ಸಹಯೋಗದೊಂದಿಗೆ 2024–25 ನೇ ಸಾಲಿನ ಅಮೃತಸಿರಿ ಯೋಜನೆಯಡಿ 11 ಮಂದಿ ಅರ್ಹ ಫಲಾನುಭವಿಗಳಿಗೆ ಮಲೆನಾಡು ಗಿಡ್ಡ ತಳಿಯ ಹೆಣ್ಣು ಕರುಗಳನ್ನು ವಿತರಣೆ ಮಾಡಲಾಯಿತು.
ವಿತರಣಾ ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಮಾನ್ಯ ಭಾಗೀರಥಿ ಮುರುಳ್ಯ ಅವರು ಲೋಕಾರ್ಪಣೆ ನೆರವೇರಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಪಶುವೈದ್ಯಾಧಿಕಾರಿಗಳು, ರೈತ ಮುಖಂಡರು ಹಾಗೂ ಫಲಾನುಭವಿಗಳ ಬಳಗ ಉಪಸ್ಥಿತರಿದ್ದರು.
ಮಲೆನಾಡು ಗಿಡ್ಡ ತಳಿವು ದೈಹಿಕವಾಗಿ ಸಣ್ಣದಾಗಿದ್ದರೂ ಶಕ್ತಿಶಾಲಿಯಾದದು, ಬೆಳವಣಿಗೆಯಲ್ಲಿಯೂ ಅಗ್ರಣಿಯಾಗಿರುವ ತಳಿ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಹವಾಮಾನಕ್ಕೆ ತಕ್ಕಂತಹ ತಳಿಯನ್ನು ನೀಡುವ ಮೂಲಕ ಜಾನುವಾರುಗಳ ಸಂರಕ್ಷಣೆಗೆ ಮತ್ತು ಸ್ಥಳೀಯ ತಳಿಗಳ ಬೆಳವಣಿಗೆಗೆ ಈ ಯೋಜನೆ ಸಹಕಾರಿ ಎಂಬ ನಂಬಿಕೆಯಿದೆ.
Post a Comment