ಉಬರಡ್ಕ ಮತ್ತು ಮರ್ಕಂಜದಲ್ಲಿ ನಡೆದ ಸಭೆಯಲ್ಲಿ ಪರಿಹಾರ ಹಾಗೂ ಸಬ್ಸಿಡಿ ವಿಷಯ ಚರ್ಚೆ
ಸುಳ್ಯ, ಜುಲೈ 21 – ಉಬರಡ್ಕ-ಮಿತ್ತೂರು ಮತ್ತು ಮರ್ಕಂಜ ಗ್ರಾಮಗಳ ಕೃಷಿಕರು ಕಾಡುಪ್ರಾಣಿಗಳ, ವಿಶೇಷವಾಗಿ ಆನೆ ದಾಳಿಯಿಂದ ತೀವ್ರ ಹಾನಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಕೃಷಿಕರೊಂದಿಗೆ ಸಂವಾದ ಸಭೆ ನಡೆಯಿತು. ಈ ಸಭೆಯಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಉಬರಡ್ಕದ C.A ಬ್ಯಾಂಕ್ ಸಭಾಂಗಣದಲ್ಲಿ ಹಾಗೂ ಮರ್ಕಂಜದ ರೆಂಜಾಳ ವಿನಾಯಕ ಸಭಾಭವನದಲ್ಲಿ ನಡೆದ ಈ ಸಭೆಯಲ್ಲಿ ಹಲವಾರು ರೈತರು ತಮ್ಮ ಕೃಷಿ ಹಾನಿಯ ಬಗ್ಗೆ ಅಧಿಕಾರಿಗಳೊಂದಿಗೆ ನೇರವಾಗಿ ಚರ್ಚಿಸಿದರು. ಕೃಷಿಕರಿಗೆ ಲಭ್ಯವಿರುವ ಪರಿಹಾರ ಮತ್ತು ಸರ್ಕಾರದ ಸವಲತ್ತುಗಳ ಕುರಿತು ವಿವರ ನೀಡಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, "ಈ ಸಮಸ್ಯೆಯ ಕುರಿತು ನಾನು ಈಗಾಗಲೇ ಮೂರು ಬಾರಿ ಅರಣ್ಯ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ರೈತರಿಗೆ ನೀಡಲಾಗುವ ಸಬ್ಸಿಡಿ ಶೇಕಡಾ 90%ಕ್ಕೆ ಏರಿಸುವಂತೆ ಮನವಿ ಸಲ್ಲಿಸಲಾಗಿದೆ. ಸಚಿವರಿಂದ ಸೂಕ್ತ ಸ್ಪಂದನೆ ನಿರೀಕ್ಷಿಸಬಹುದು," ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಬರಡ್ಕ ಸೊಸೈಟಿ ಮತ್ತು ರೆಂಜಾಳದ ರೈತರಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಸುಳ್ಯ ವಲಯದ ACF ಪ್ರಶಾಂತ ಪೈ, ಅರಣ್ಯ ವಲಯ ಅಧಿಕಾರಿ ಮಂಜುನಾಥ, ಕಂದಾಯ ಅಧಿಕಾರಿ ಅವಿನ್ ರಂಗತ್ ಮಲೆ, ಉಬರಡ್ಕ ಗ್ರಾಮಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಸೂಂತೊಡು, ಉಪಾಧ್ಯಕ್ಷೆ ಚಿತ್ರ ಕುಮಾರಿ, ಸದಸ್ಯ ಪ್ರಶಾಂತ ಪಾನತ್ತಿಲ, C.A ಬ್ಯಾಂಕ್ ಅಧ್ಯಕ್ಷ ದಾಮೋದರ ಮದುವೆಗದ್ದೆ, ಮರ್ಕಂಜ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, C.A ಬ್ಯಾಂಕ್ CEO ಜಯಪ್ರಕಾಶ ಉರುಂಡೆ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
Post a Comment