ಮಂಗಳೂರು ನಗರದಲ್ಲಿ ವಿಶೇಷ ಕಾರ್ಯಪಡೆಗೆ ಪ್ರಾಯೋಗಿಕ ತರಬೇತಿ: ಕಾನೂನು ಸುವ್ಯವಸ್ಥೆಗೆ ಮುಂದಾಳು ಹೆಜ್ಜೆ.

ಮಂಗಳೂರು, ಜುಲೈ 2: ದಕ್ಷಿಣ ಕನ್ನಡ ಸೇರಿದಂತೆ ಮೂರು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ-ಸೌಹಾರ್ದತೆಯ ಕಾಪಾಡುವ ಉದ್ದೇಶದಿಂದ ಹೊಸದಾಗಿ ಸ್ಥಾಪಿತವಾದ ವಿಶೇಷ ಕಾರ್ಯಪಡೆ (Special Task Force) ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಂಗಳೂರಿನಲ್ಲಿ ಇಂದು ಪ್ರಾಯೋಗಿಕ ತರಬೇತಿ ನೀಡಲಾಯಿತು.

ಮಂಗಳೂರು ನಗರದ ನೆಹರು ಮೈದಾನದಲ್ಲಿ ನಡೆದ ಈ ತರಬೇತಿಯಲ್ಲಿ ಕೋಮು ಗಲಭೆಗಳ ಸಂದರ್ಭಗಳಲ್ಲಿ ಉದ್ರಿಕ್ತ ಜನ ಸಮೂಹವನ್ನು ನಿಯಂತ್ರಿಸುವ ಸಲುವಾಗಿ ಉಪಯೋಗಿಸಲಾಗುವ Anti-Riots Gun ಹಾಗೂ Stun Shell ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ತರಬೇತಿಯನ್ನು ನಡೆಸಲಾಯಿತು. ಈ ತರಬೇತಿಯಲ್ಲಿ ವಿಶೇಷ ಕಾರ್ಯಪಡೆ ಘಟಕದ Operational Wingನ 95 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಹೆಚ್ಚಿನ ಪರಿಣಾಮಕಾರಿ ಕಾರ್ಯಪಟುತೆಗಾಗಿ ಗುಪ್ತಚರ ವಿಭಾಗ ಮತ್ತು ಸೈಬರ್ ವಿಭಾಗದ ಕೆಲ ಅಧಿಕಾರಿಗಳಿಗೆ ದ್ವೇಷ ಭಾಷಣ, ಸುಳ್ಳು ಮಾಹಿತಿ ಹರಡಿಸುವಂತಹ ಸಾಮಾಜಿಕ ಜಾಲತಾಣದ ಚಟುವಟಿಕೆಗಳ ಮೇಲ್ವಿಚಾರಣೆ ಹಾಗೂ ಮಾಹಿತಿ ಸಂಗ್ರಹಣೆ ಕುರಿತಾಗಿ ತಾಂತ್ರಿಕ ತರಬೇತಿ ನೀಡಲಾಯಿತು.
ಈ ಸಮಾರಂಭವನ್ನು ಪೊಲೀಸ್ ಆಯುಕ್ತರು ಹಾಗೂ ಡಿಐಜಿ, ವಿಶೇಷ ಕಾರ್ಯಪಡೆ, ಮಂಗಳೂರು ನಗರ ರವರು ನೇತೃತ್ವವಹಿಸಿದ್ದರು.
ಈ ತರಬೇತಿ ಮೂಲಕ ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ವಿಶೇಷ ಕಾರ್ಯಪಡೆಯು ಹೆಚ್ಚು ಶಿಸ್ತುಗಟ್ಟಿದ ಹಾಗೂ ತಾಂತ್ರಿಕವಾಗಿ ಸಜ್ಜುಗೊಂಡ ಬಲವಾಗಿ ರೂಪುಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ.

Post a Comment

Previous Post Next Post