ಪುತ್ತೂರು, ಜುಲೈ 1: ಪುತ್ತೂರು ತಾಲೂಕಿನ ಪುತ್ತೂರು ಕಸ್ಬಾ ಗ್ರಾಮದ ಸಾಮೆತ್ತಡ್ಕ ಎಂಬಲ್ಲಿ ಅಕ್ರಮವಾಗಿ ವೈಶ್ಯವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಗೆ ದಿನಾಂಕ 01-07-2025 ರಂದು ದೂರು ಬಂದಿತ್ತು.
ದೂರಿನ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಠಾಣಾ ನಿರೀಕ್ಷಕರ ನೇತೃತ್ವದಲ್ಲಿ ಸೂಚಿತ ಸ್ಥಳದಲ್ಲಿ ಧಾಳಿ ನಡೆಸಿದ್ದು, ಆರೋಪಿತನಾದ ವಿಲ್ಪೇಡ್ ಎಂಬಾತನ ವಾಸ್ತವ್ಯದ ಮನೆಯ ಸಮೀಪದ ಕಟ್ಟಡದಲ್ಲಿ ನಡೆಸಲಾಗಿದ್ದ ಅಕ್ರಮ ವ್ಯವಹಾರದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಸಂಬಂಧ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 51/2025 ನಂತೆ, ಭಾರತೀಯ ನೈತಿಕ ಅಪರಾಧ ಕಾಯಿದೆ 1956ರ (ITP Act) ಸೆಕ್ಷನ್ 3, 4, 5(3) ಹಾಗೂ ಭಾರತೀಯ ದಂಡ ಸಂಹಿತೆ (BNS 2023) ಸೆಕ್ಷನ್ 143(2) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ 15-07-2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.
Post a Comment