ಸುಳ್ಯ: ಜುಲೈ 28,ಜಿಲ್ಲೆಯಲ್ಲಿ ಮಳೆಯ ಪರಿಣಾಮವಾಗಿ ಮರಗಳು ಬಿದ್ದು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ಹಾಗೂ ಕಡಬ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಉಂಟಾಗಿದೆ.
ಈ ಸಂಬಂಧ ಸ್ಥಳೀಯ ಶಾಸಕರು ತುರ್ತಾಗಿ ಮೆಸ್ಕಾಂ ಅಧಿಕಾರಿಗಳ ಜೊತೆ ಸಭೆ ನಡೆಸಿ, ಸಮಸ್ಯೆಗೊಳಗಾದ ಪ್ರದೇಶಗಳಿಗೆ ಶೀಘ್ರದಲ್ಲಿ ಸರಬರಾಜು ಪುನಸ್ಥಾಪನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ ಮೆಸ್ಕಾಂ ಎಂ.ಡಿ ಜಯಕುಮಾರ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ, ಖಾಲಿ ಇರುವ ಪವರ್ ಮಾನ್ ಹುದ್ದೆಗಳಿಗೆ ನೇಮಕಗೊಂಡ ನೌಕರರನ್ನು ತಕ್ಷಣ ಸೇವೆಗೆ ನಿಯೋಜಿಸುವಂತೆ ಕೋರಿದರು.
ಅರಣ್ಯ ಪ್ರದೇಶಗಳಲ್ಲಿ ಲೈನ್ ಗೆ ಬೀಳುವ ಸಾಧ್ಯತೆಯಿರುವ ಮರಗಳನ್ನು ಪೂರ್ವ ಸಿದ್ಧತೆಯಿಂದ ಕತ್ತರಿಸಲು ಅಗತ್ಯ ನೆರವು ನೀಡಲು ಅರಣ್ಯ ಇಲಾಖೆ ರೇಂಜರ್ ಮಂಜುನಾಥ್ ರವರಿಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಹರೀಶ್ ಕಂಜಿಪಿಲಿ, ಚನಿಯ ಕಲ್ತಡ್ಕ, ಸುಧಾಕರ್ ಕುರುಂಜಿ, ಸಂತೋಷ ಕುತ್ತಮೊಟ್ಟೆ, ದಯಾನಂದ ಕುರುಂಜಿ, ನೀಕೇಶ್ ರಾಜ ಉಬರಡ್ಕ ಮೊದಲಾದವರು ಉಪಸ್ಥಿತರಿದ್ದರು.
Post a Comment