ಗ್ರಾಮ ವಿಕಾಸ ಸಮಿತಿ ಸಿದ್ದಾಪುರ, ಗ್ರಾಮ ಪಂಚಾಯತ್ ಸಿದ್ದಾಪುರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರಗಿತು.
ಕಾರ್ಯಕ್ರಮವನ್ನು ಗ್ರಾಮ ವಿಕಾಸ ಸಮಿತಿ ವಿಭಾಗ ಟೋಳಿ ಸದಸ್ಯರಾದ ಶ್ರೀಮತಿ ರಮಿತಾ ಶೈಲೇಂದ್ರ ಹಾಗೂ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಜ್ಯೋತಿ ಕೆ.ಸಿ ಅವರು, ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಗಣೇಶ ಅವರಿಗೆ ಗಿಡ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶ್ರೀಮತಿ ರಮಿತಾ ಶೈಲೇಂದ್ರ, “ಪ್ರಕೃತಿ ನಮಗೆ ಕೊಟ್ಟ ವರ, ನಾವು ಅದರ ಋಣ ತೀರಿಸುವ ಜವಾಬ್ದಾರಿ ಹೊಂದಿರುತ್ತೇವೆ. ವನಮಹೋತ್ಸವದ ಹಿನ್ನೆಲೆ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಪರಿಸರದ ಪಾತ್ರ ಮಹತ್ತರವಾದದ್ದು,” ಎಂದು ಹೇಳಿದರು.
ಅರಣ್ಯಾಧಿಕಾರಿಯಾದ ಶ್ರೀಮತಿ ಜ್ಯೋತಿ ಕೆ.ಸಿ ಮಾತನಾಡಿ, “ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮುಂದಿನ ಪೀಳಿಗೆಗೆ ಪ್ರಕೃತಿಯ ಪಾಠವನ್ನು ಅರಿವುಗೊಳಿಸಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯ,” ಎಂದು ಅಭಿಪ್ರಾಯಪಟ್ಟರು.
ಗ್ರಾಮ ವಿಕಾಸ ಸಮಿತಿಯ ಪ್ರಾತಿನಿಧ್ಯವನ್ನೊಳಗೊಂಡು ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಿದ್ದರು. ಅವರಲ್ಲಿ ಪ್ರಮುಖರಾಗಿ:
ಶ್ರೀ ಪ್ರವೀಣ್ ಪಟೇಲ್, ಮಾನ್ಯ ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಿದ್ದಾಪುರ
ಶ್ರೀ ಕೃಷ್ಣ ಪೂಜಾರಿ, ಉಪಾಧ್ಯಕ್ಷರು, ಗ್ರಾಮ ಪಂಚಾಯತ್
ಶ್ರೀ ಸಂಜೀವ, ಉಪ ವಲಯ ಅರಣ್ಯಾಧಿಕಾರಿ
ಶ್ರೀ ಸುಧಾಕರ ಆಜ್ರಿ, ಜಿಲ್ಲಾ ಸಹಸಂಯೋಜಕರು, ಗ್ರಾಮ ವಿಕಾಸ ಸಮಿತಿ
ಶ್ರೀ ಶ್ರೀಕಾಂತ್ ನಾಯಕ್, ತಾಲೂಕು ಸಂಯೋಜಕರು
ಶ್ರೀ ಎಸ್. ಪಾಂಡುರಂಗ ಪೈ, ಸಂಯೋಜಕರು, ಗ್ರಾಮ ವಿಕಾಸ ಸಮಿತಿ
ಶ್ರೀ ಭೋಜರಾಜ್ ಶೆಟ್ಟಿ, ಅಧ್ಯಕ್ಷರು, ಭಾರತೀಯ ಕಿಸಾನ್ ಸಂಘ
ಶ್ರೀ ಭೋಜ ಶೆಟ್ಟಿ ಕಡ್ರಿ, ಅಧ್ಯಕ್ಷರು, ಇಂದಿರಾಗಾಂಧಿ ವಸತಿ ಶಾಲೆ ಹೋರಾಟ ಸಮಿತಿ
ಶ್ರೀ ಎನ್.ಜಿ. ಭಟ್, ಅಧ್ಯಕ್ಷರು, ರೋಟರಿ ಕ್ಲಬ್ ಹೊಸಂಗಡಿ
ಶ್ರೀ ಟಿ.ಜಿ. ಪಾಂಡುರಂಗ ಪೈ, ಜಿಲ್ಲಾಧ್ಯಕ್ಷರು, ವಿದ್ಯಾಭಾರತಿ
ಶ್ರೀ ಚಿದಾನಂದ ಶೆಟ್ಟಿ, ಅಧ್ಯಕ್ಷರು, ಗ್ರಾಮ ಅರಣ್ಯ ಸಮಿತಿ
ಶ್ರೀಕಾಂತ್ ಶೆಣೈ, ಪರ್ಯಾವರಣ ಪ್ರಮುಖ, ಆರ್ಗೋಡು
ಶ್ರೀ ರಾಜೇಂದ್ರ ಬೆಚ್ಚಳ್ಳಿ, ಅಧ್ಯಕ್ಷರು, ಭೋಜು ಪೂಜಾರಿ ಚಾರಿಟಬಲ್ ಟ್ರಸ್ಟ್
ಅದೇಂತೆ, ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು, ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಬೃಹತ್ ಸಂಖ್ಯೆಯಲ್ಲಿ ಹಾಜರಿದ್ದರು.
ಪ್ರಾರಂಭದಲ್ಲಿ ಶ್ರೀ ಗಣೇಶ ಸ್ವಾಗತಿಸಿದರು ಹಾಗೂ ಅಧ್ಯಾಪಕ ಪ್ರತಾಪಚಂದ್ರ ಕಿಣಿ ನಿರೂಪಣೆ ಮತ್ತು ವಂದನೆ ಸಲ್ಲಿಸಿದರು.
Post a Comment