ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ 02-07-2025 ರಂದು ದಾಖಲಾದ ಎನ್.ಡಿ.ಪಿ.ಎಸ್ (NDPS) ಕಾಯ್ದೆಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಬ್ಬ ಆರೋಪಿಯನ್ನು ಮೈಸೂರಿನಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.
ಅಭಿಯುಕ್ತನನ್ನು ಧ್ರುವ್ ಡಿ ಶೆಟ್ಟಿ (ವಯಸ್ಸು 22), ತಂದೆ: ದಿವಾಕರ್ ಶೆಟ್ಟಿ, ನಿವಾಸಿ: ಸಕಲೇಶಪುರ ತಾಲ್ಲೂಕು, ಹಾಸನ ಜಿಲ್ಲೆ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಮಂಗಳೂರು ಸೆನ್ ಕ್ರೈಂ ಠಾಣೆಯಲ್ಲಿ ಅಪರಾಧ ಸಂಖೆ್ಯ 31/2025 ರಂತೆ 20(b)(ii)(B) ಹಾಗೂ 20.8(c) ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಹಿಂದೆಯೇ ದಿನಾಂಕ 02-07-2025 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ 5 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು.
ಮುಂದುವರಿದ ತನಿಖೆಯ ಭಾಗವಾಗಿ, ಮಾದಕ ವಸ್ತುಗಳನ್ನು ಈ ಮೊದಲಿನ 5 ಆರೋಪಿಗಳಿಗೆ ಪೂರೈಸುತ್ತಿದ್ದ ಪ್ರಮುಖ ಆರೋಪಿತನಾಗಿದ್ದ ಧ್ರುವ್ ಡಿ ಶೆಟ್ಟಿಯನ್ನು ಮೈಸೂರಿನಲ್ಲಿ ಪತ್ತೆಹಚ್ಚಿ ದಿನಾಂಕ 06-07-2025 ರಂದು ಬಂಧಿಸಲಾಗಿದೆ. ಆರೋಪಿತನಿಂದ 1 ಮೊಬೈಲ್ ಫೋನ್ ಹಾಗೂ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆ ಇನ್ನೂ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಇತರೆ ಆರೋಪಿತರ ಪತ್ತೆ ಕಾರ್ಯವೂ ಪ್ರಗತಿಪಥದಲ್ಲಿದೆ.
ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸೆನ್ ಕ್ರೈಂ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಕಾರ್ಯನಿರ್ವಹಿಸಿದ್ದಾರೆ.
Post a Comment