ಉಪ್ಪಿನಂಗಡಿ: ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜೇಸಿ ಶೇಖರ್ ಗೌಂಡತ್ತಿಗೆ ಅವರಿಗೆ ಜೇಸಿಐ ಸಾಧನಶ್ರೀ ಪ್ರಶಸ್ತಿ.

ಉಪ್ಪಿನಂಗಡಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡ ಜೇಸಿಐ ವಲಯ 15ರ ವ್ಯವಹಾರ ಸಮ್ಮೇಳನ "ಸಾಧಕ ಜೇಸಿಗಳ ತರಂಗ" -ಮೃದಂಗ 2025 ಮಡಂತ್ಯಾರು ಆತಿಥ್ಯದಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ವೃತ್ತಿ ಮತ್ತು ವ್ಯವಹಾರ ಕ್ಷೇತ್ರದಲ್ಲಿ ಅನುಪಮ ಸೇವೆ ಮತ್ತು ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಜೇಸಿಐ ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವು ನಡೆಯಿತು.ಈ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಜೇಸಿಐ ಉಪ್ಪಿನಂಗಡಿ ಘಟಕದ  2023ನೇ ಸಾಲಿನ ಘಟಕಾಧ್ಯಕ್ಷ  ಜೇಸಿ ಶೇಖರ್ ಗೌಂಡತ್ತಿಗೆ ಅವರಿಗೆ ವೃತ್ತಿ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಜೇಸಿಐ ಸಾಧನಶ್ರೀ ಪ್ರಶಸ್ತಿಯನ್ನು  ವಲಯಾಧ್ಯಕ್ಷ ಜೇಸಿ ಸೆನೆಟರ್ ಅಭಿಲಾಷ್.ಬಿ.ಎ, ಮತ್ತು ಜೇಸಿ ವಲಯ ನಿರ್ದೇಶಕ ಜೇಸಿ ಆಶೋಕ್ ಗುಂಡ್ಯಲಿಕೆ ನೀಡಿ ಗೌರವಿಸಿದರು.ಜೇಸಿ ಶೇಖರ್ ಗೌಂಡತ್ತಿಗೆ ತಮ್ಮ ಧರ್ಮಪತ್ನಿ ಶ್ರೀಮತಿ ಮಮತಾ ಮತ್ತು ಮಗಳು ಬೇಬಿ ಸ್ತತಿ ಜೊತೆ  ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಜೇಸಿ ಸುಹಾಸ್ ಮರಿಕೆ,ವಲಯ ಸಂಯೋಜಕ ಜೇಸಿ ವಿನೀತ್ ಶಗ್ರೀತ್ತಾಯ, ವಲಯ ಉದಕ ಪತ್ರಿಕೆಯ ಸಂಪಾದಕ ಜೇಸಿ ಮೋಹನ್ ಚಂದ್ರ ತೋಟದ ಮನೆ, ಉಪ್ಪಿನಂಗಡಿ ಘಟಕದ ಕಾರ್ಯದರ್ಶಿ ಜೇಸಿ ಮಹೇಶ್ ಖಂಡಿಗ, ಜೇಸಿ ಸದಸ್ಯರಾದ ಜೇಸಿ ದಿವಾಕರ್ ಶಾಂತಿನಗರ ಉಪಸ್ಥಿತರಿದ್ದರು.

Post a Comment

Previous Post Next Post