ಜನಪ್ರಿಯ ನ್ಯೂಸ್ ಚಾನೆಲ್ TV9 ಕನ್ನಡದ ಹಿರಿಯ ನಿರೂಪಕ ರಂಗನಾಥ್ ಭಾರದ್ವಾಜ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು.
ಅವರನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಹಾಗೂ ಲೋಲಾಕ್ಷ ಕೈಕಂಬ ಆತ್ಮೀಯವಾಗಿ ಸ್ವಾಗತಿಸಿದರು.
ರಂಗನಾಥ್ ಭಾರದ್ವಾಜ್ ಅವರು ಸುದ್ದಿಜಾಲದ ಒಬ್ಬ ಅನುಭವಸಂಪನ್ನ ಮುಖಂಡರಾಗಿದ್ದು, ತಮ್ಮ ನಿಷ್ಠುರ ಹಾಗೂ ಸ್ಪಷ್ಟ ನಿರೂಪಣಾ ಶೈಲಿಯಿಂದ ಜನಮನ ಗೆದ್ದಿದ್ದಾರೆ. ಅವರು ಧಾರ್ಮಿಕ ಭಾವನೆ ಮೆರೆದ ಈ ಭೇಟಿ.
ಈ ಸಂದರ್ಭ ಅವರು ದೇವಸ್ಥಾನದ ಮೂಲಸ್ಥಾನಕ್ಕೆ ಹೋಗಿ ವಿಶೇಷ ಪೂಜೆಯಲ್ಲೂ ಭಾಗವಹಿಸಿದರು.
إرسال تعليق