06 ವರ್ಷಗಳಿಂದ ತಲೆಮರೆಸಿದ್ದ ಆರೋಪಿಯ ಬಂಧನ: ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಮತ್ತೊಂದು ಪ್ರಕರಣ ದಾಖಲು.

ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದಲ್ಲಿ 2018 ರಲ್ಲಿ ಜಾಮೀನು ಪಡೆದು, ಬಳಿಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು ಆರು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.

ಮಹಮ್ಮದ್ ಹನೀಫ್ (55), ವಾಸ: ಸೋಮವಾರಪೇಟೆ, ಕೊಡಗು – ಮಡಿಕೇರಿ ಮೂಲದ ವ್ಯಕ್ತಿ. ಈತನ ವಿರುದ್ಧ 2001ರಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 35/2001 ಕಲಂ 379, 34 ಭಾ.ದಂ.ಸಂ. ಅಡಿಯಲ್ಲಿ ಕೇಸು ದಾಖಲಾಗಿತ್ತು. ಹನೀಫ್ 2018 ರಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರೂ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿದ್ದನು.

ಪೊಲೀಸರು ನಿಗಾ ಇಟ್ಟುಕೊಂಡು ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಅವನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಿರಂತರವಾಗಿ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಹಿನ್ನೆಲೆ, ಆತನ ವಿರುದ್ಧ ಇದೀಗ ಪುತ್ತೂರು ನಗರ ಠಾಣೆಯಲ್ಲಿ ಹೊಸದಾಗಿ ಕಲಂ 269 BNS ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Post a Comment

Previous Post Next Post