ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ಬೆಥನಿ ದಿನವನ್ನುಆಚರಿಸಲಾಯಿತು
.ಸಂಸ್ಥೆಯ ಸಂಚಾಲಕರಾದ ರೆ. ಫಾ. ಜೈಸನ್ ಸೈಮನ್ ಸಭಾಧ್ಯಕ್ಷತೆ ವಹಿಸಿದ್ದರು. ನೂಜಿಬಾಲ್ತಿಳ ಬೆಥನಿ ಆಶ್ರಮದ ಸಂಚಾಲಕರಾದ ವಂದನೀಯ ಗುರುಗಳಾದ ಲಿನ್ಸನ್ ಒ. ಐ. ಸಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಾ ಬೆಥನಿ ದಿನದ ಮಹತ್ವವನ್ನು ವಿವರಿಸುತ್ತಾ ಪ್ರತಿಯೊಬ್ಬರು ಜೀವನದಲ್ಲಿ ಸೇವಾ ಮನೋಭಾವವನ್ನು ರೂಡಿಸಿಕೊಳ್ಳಬೇಕು, ಇದರಿಂದ ಬದುಕಿನಲ್ಲಿ ಯಶಸ್ಸು ಖಂಡಿತ ಎಂದರು ಪ್ರೀತಿ ಸಹನೆಗಳೊಂದಿಗೆ ಬದುಕಿನಲ್ಲಿ ಉತ್ತಮ ಗುರಿಯನ್ನು ಇಟ್ಟು ಕೊಂಡು ಮುನ್ನಡೆಯಿರಿ ಎಂದು ಶುಭ ಹಾರೈಸಿದರು, ರೇ. ಫಾ. ಎಬಿನ್ ಪಣಿಕ್ಕರ್ ಒಐಸಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್, ಶಿಕ್ಷಕಿ ಪೂರ್ಣಿಮಾ ಶೆಣೈ ಮಾತನಾಡಿ ಶುಭ ಹಾರೈಸಿದರು.ರೇ. ಫಾ ಜೋಬ್. ಒಐಸಿ,ರೇ. ಫಾ. ಜೇಮ್ಸ್ ಒಐಸಿ,ಐಟಿಐ ಪ್ರಾಂಶುಪಾಲ ಸಜಿ ತೋಮಸ್, ಮುಖ್ಯೋಪಾಧ್ಯಾಯ ಜಾರ್ಜ್ ಕೆ. ತೋಮಸ್,ಜೋಸ್ ಪ್ರಕಾಶ್ ಉಪಪ್ರಾಂಶುಪಾಲ ಜೋಸ್ ಎಮ್. ಜೆ,ಕಾಲೇಜು ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್ ಉಪಸ್ಥಿತರಿದ್ದರು, ಶಾಲಾ ಅಧ್ಯಾಪಕವೃಂದ, ವಿದ್ಯಾರ್ಥಿಗಳು ಪಾಲ್ಗೊಂಡರು.ವಿದ್ಯಾರ್ಥಿಗಳಾದ ಲಿಖಿತ ಸ್ವಾಗತಿಸಿ, ನಿಖಿಲ್ ವಂದಿಸಿದರು, ಸೋನಾ ಫ್ರಾನ್ಸಿಸ್ ನಿರೂಪಿಸಿದರು,ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
Post a Comment