🚨 ಸುಳ್ಯದಲ್ಲಿ ಅಕ್ರಮ ಕೆಂಪುಕಲ್ಲು ಸಾಗಾಟ ಪತ್ತೆ – 4 ಲಾರಿಗಳು ಪೊಲೀಸ್ ವಶಕ್ಕೆ.

ಸುಳ್ಯ: ಆಗಸ್ಟ್ 24, 2025 – ಮುರೂರು ಕಡೆಯಿಂದ ಮಡಿಕೇರಿ ಕಡೆಗೆ ಸುಳ್ಯ ಮಾರ್ಗವಾಗಿ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವ 4 ಲಾರಿಗಳನ್ನು ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಬೆಳಗಿನ ವೇಳೆಯಲ್ಲಿ ಬಂದ ಖಚಿತ ಮಾಹಿತಿಯ ಮೇರೆಗೆ, ಜಾಲ್ಸೂರು ಗ್ರಾಮದ ಅಡ್ಕಾರು ಬಳಿ ಪೊಲೀಸರು ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಯಾವುದೇ ಅನುಮತಿಯಿಲ್ಲದೇ 4 ಲಾರಿಗಳಲ್ಲಿ ಒಟ್ಟು 1750 ಕೆಂಪುಕಲ್ಲುಗಳನ್ನು ಸಾಗಿಸುತ್ತಿರುವುದು ಬಹಿರಂಗವಾಗಿದೆ.

ಸದ್ಯಕ್ಕೆ ವಶಪಡಿಸಿಕೊಳ್ಳಲಾದ ಲಾರಿಗಳ ಮೌಲ್ಯ ಸುಮಾರು ₹45 ಲಕ್ಷವಾಗಿದ್ದು, ಕಲ್ಲುಗಳ ಅಂದಾಜು ಮೌಲ್ಯ ₹43,750 ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಸಂಬಂಧವಾಗಿ ಲಾರಿಗಳ ಚಾಲಕರು ಹಾಗೂ ಮಾಲಕರುಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ: 91/2025 ಕಲಂ: 303(2) BNS, 4(1) 21MMRD, Karnataka Minor Mineral Consistent Rule 3.44 & 66(1) ಹಾಗೂ 192(a) IMV Act ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.

Post a Comment

Previous Post Next Post