ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸ್ವಚ್ಛತಾ ಕಾರ್ಯ – ಪ್ಲಾಸ್ಟಿಕ್ ರಹಿತ ತೀರ್ಥ ಕ್ಷೇತ್ರದತ್ತ ಹೆಜ್ಜೆ.

ಸುಬ್ರಹ್ಮಣ್ಯ, ಆಗಸ್ಟ್ 24 :ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ಹಾಗೂ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಅವರ ಜಂಟಿ ಆಶ್ರಯದಲ್ಲಿ ಪ್ರತಿ ಭಾನುವಾರವೂ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.


ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶನದಂತೆ ಮುಜರಾಯಿ ದೇವಸ್ಥಾನಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ ದೇವಸ್ಥಾನದ ಪಕ್ಕದ ಪರಿಸರ, ರಸ್ತೆ ಬದಿ, ವಾಹನ ನಿಲುಗಡೆ ಸ್ಥಳ, ಶೌಚಾಲಯದ ಬಳಿಯಲ್ಲಿ ಇನ್ನೂ ಪ್ಲಾಸ್ಟಿಕ್ ಚೀಲ, ಬಾಟಲ್ ಹಾಗೂ ತ್ಯಾಜ್ಯ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಗಮನಿಸಿ ಈ ಸ್ವಚ್ಛತಾ ಕಾರ್ಯವನ್ನು ಆರಂಭಿಸಲಾಗಿದೆ.

ಈ ಭಾನುವಾರವೂ ಕುಮಾರಧಾರೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ತನಕದ ಪ್ರದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಕಸ ವಿಲೇವಾರಿಗೆ ಕಳುಹಿಸಲಾಯಿತು. ಸುಮಾರು 50-60 ಸ್ವಯಂಸೇವಕರು ಈ ಕಾರ್ಯದಲ್ಲಿ ಪಾಲ್ಗೊಂಡರು.


ಸ್ವಚ್ಛತಾ ಕಾರ್ಯದ ವೇಳೆ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಬಂದು ಸೇವೆಯಲ್ಲಿ ಪಾಲ್ಗೊಂಡು, ಮುಂದಿನ ದಿನಗಳಲ್ಲಿ ದೇವಳದ ಸಿಬ್ಬಂದಿ ಸಹ ಈ ಕಾರ್ಯದಲ್ಲಿ ಜೊತೆಯಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಡಾ. ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಡಾ. ರವಿ ಕಕ್ಕೆ ಪದವು, ಕುಕ್ಕೆ ಶ್ರೀ ಸೀನಿಯರ್ ಚೇಂಬರ್‌ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ಉಪಸ್ಥಿತರಿದ್ದರು.

👉 ಈ ಕಾರ್ಯದ ಮೂಲಕ ಪ್ಲಾಸ್ಟಿಕ್ ರಹಿತ ಸುಬ್ರಹ್ಮಣ್ಯ ನಿರ್ಮಾಣದತ್ತ ಶ್ಲಾಘನೀಯ ಹೆಜ್ಜೆ ಇಡಲಾಗಿದೆ.




Post a Comment

Previous Post Next Post