ಬಂಟ್ವಾಳದಲ್ಲಿ ಪಡಿತರ ಅಕ್ಕಿ ದಾಸ್ತಾನು ಬಯಲು – ಇಬ್ಬರ ವಿರುದ್ಧ ಪ್ರಕರಣ.

ಬಂಟ್ವಾಳ, ಆ.23:ಬಂಟ್ವಾಳ ತಾಲೂಕು ಗೊಳ್ತ ಮಜಲು ಗ್ರಾಮದ ಪಟ್ಟೆಕೋಡಿ ಪ್ರದೇಶದ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಂಗ್ರಹಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಹಾರ ನಿರೀಕ್ಷಕ ಎ. ಪ್ರಶಾಂತ್ ಶೆಟ್ಟಿ ಅವರು ಬಂಟ್ವಾಳ ನಗರ ಠಾಣಾ ಪೊಲೀಸರ ಸಹಕಾರದಿಂದ ನಡೆಸಿದ ದಾಳಿಯಲ್ಲಿ, ಆರೋಪಿ ಉಮ್ಮರಬ್ಬ (ಗೊಳ್ತಮಜಲು, ಬಂಟ್ವಾಳ) ಎಂಬಾತ ಕಟ್ಟಡವೊಂದರಲ್ಲಿ ಪಡಿತರ ಅಕ್ಕಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ.
ದಾಳಿಯಲ್ಲಿ ಒಟ್ಟು 64 ಗೋಣಿ ಚೀಲಗಳಲ್ಲಿ 2103.35 ಕೆ.ಜಿ ಬೆಳ್ತಿಗೆ ಅಕ್ಕಿ ಹಾಗೂ 467.10 ಕೆ.ಜಿ ಕುಚ್ಚಲಕ್ಕಿ ಪತ್ತೆಯಾಗಿದೆ. ಇದಕ್ಕೆ ಸುಮಾರು ₹58,288/- ಮೌಲ್ಯ ಅಂದಾಜಿಸಲಾಗಿದೆ. ಆರೋಪಿಗಳು ಕೆಎ.19.ಡಿ.3896 ನಂಬರ್‌ನ ಆಟೋ ರಿಕ್ಷಾದಲ್ಲಿ ಸಾಗಾಟ ಮಾಡಲು ಸಿದ್ಧತೆ ನಡೆಸುತ್ತಿದ್ದಾಗಲೇ ಅಧಿಕಾರಿಗಳು ಅವರನ್ನು ಪತ್ತೆಹಚ್ಚಿದ್ದಾರೆ.


ಈ ಕೃತ್ಯದಲ್ಲಿ ಉಮ್ಮರಬ್ಬನ ಜೊತೆಗೆ ಮತ್ತೊಬ್ಬ ಸ್ಥಳೀಯ ನಿವಾಸಿ ರಫೀಕ್ ಸಹ ಭಾಗಿಯಾಗಿರುವುದು ತಿಳಿದುಬಂದಿದೆ. ಸ್ಥಳದಲ್ಲಿದ್ದ ಅಕ್ಕಿ ಚೀಲಗಳು, ಆಟೋ ರಿಕ್ಷಾ, ತೂಕದ ಯಂತ್ರ, ಖಾಲಿ ಚೀಲಗಳು ಸೇರಿದಂತೆ ವಸ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 96/2025 ಅಡಿಯಲ್ಲಿ, ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7 ಹಾಗೂ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ ಆದೇಶ) 2016ರ ಕಲಂ 18 ಪ್ರಕಾರ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

Post a Comment

Previous Post Next Post