ಸಿರಿಬಾಗಿಲು ಗುಂಡ್ಯ : ಸಾರ್ವಜನಿಕ ಗಣೇಶೋತ್ಸವ ಸಮಿತಿ ಸಿರಿಬಾಗಿಲು ಗುಂಡ್ಯ ವತಿಯಿಂದ ನಡೆಯಲಿರುವ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ ,8 ರಂದು ಭಕ್ತರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಜಗದೀಶ್ ರೆಂಜಾಳ, ಕಾರ್ಯದರ್ಶಿ ಸುಧಾಕರ್ ದೇರಣೆ, ಕೋಶಾಧಿಕಾರಿ ಜನಾರ್ದನ ಅನಿಲ, ಉಪಾಧ್ಯಕ್ಷ ವಿಕ್ರಮ್ ಪಿಲಿಕಜೆ, ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಪದ್ಮನಾಭ ನೀರಾಯ, ಕಾರ್ಯದರ್ಶಿ ಗಣೇಶ್ ಅನಿಲ, ಅರ್ಚಕ ಪ್ರಹ್ಲಾದ್ ಮಯ್ಯ, ಸಂಚಾಲಕರು ಸಂತೋಷ್ ಅಡ್ಡಹೊಳೆ, ನವೀನ್ ಆಮಡ್ಕ, ಸದಸ್ಯರಾದ ಹರೀಶ್ ಗುಂಡ್ಯತೋಟ ಹಾಗೂ ಸತೀಶ್ ಗುಂಡ್ಯತೋಟ ಉಪಸ್ಥಿತರಿದ್ದರು.
ಗಣೇಶೋತ್ಸವದ ಕಾರ್ಯಕ್ರಮಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿ ಭಾವದ ಹಬ್ಬವಾಗಿ ನಡೆಯಲಿದ್ದು, ಸ್ಥಳೀಯರು ಹಾಗೂ ಭಕ್ತಾದಿಗಳಿಗೆ ಆಹ್ವಾನ ನೀಡಲಾಯಿತು.
Post a Comment