ಬಹುಕಾಲದ ಬೇಡಿಕೆ ಇದೀಗ ನೆರವೇರಿದೆ. ಹಳ್ಳಿ ಪ್ರದೇಶದ ಜನರಿಗೆ ಸುಗಮ ಸಾರಿಗೆ ವ್ಯವಸ್ಥೆ ಒದಗಿಸುವ ಉದ್ದೇಶದಿಂದ, ಕೆಎಸ್ಆರ್ಟಿಸಿ ಹೊಸ ಬಸ್ ಸೇವೆಯನ್ನು ನಾಳೆಯಿಂದ ಆರಂಭಿಸುತ್ತಿದೆ. ಈ ಬಸ್‌ಗಳು ಆಲಂಕಾರು – ಮಾದೇರಿ ಮಾರ್ಗವಾಗಿ ನೆಲ್ಯಾಡಿ ಹಾಗೂ ಉಪ್ಪಿನಂಗಡಿ – ಕಡಬ ಮಾರ್ಗವಾಗಿ ಮಣಿಭಂಡ ಕಡೆ ಸಂಚಾರ ಮಾಡಲಿವೆ.
ಮಾನ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ದಕ್ಷಿಣ ಕನ್ನಡ ಪ್ರವಾಸದ ವೇಳೆ ಸ್ಥಳೀಯರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಈ ಬಸ್ ಸೇವೆಗೆ ಅನುಮತಿ ನೀಡಿದರು. ಆಗಸ್ಟ್ 15, ಶನಿವಾರ, ಅಲಂಕಾರುದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸೇವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕರಿಸಿದ ಸಾರಿಗೆ ಸಚಿವರು, ಮುಜರಾಯಿ ಸಚಿವರು, ಇಲಾಖೆಯ ಎಲ್ಲಾ ಅಧಿಕಾರಿಗಳು, ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರ ಅಧ್ಯಕ್ಷ ಭರತ್ ಮುಂಡೋಡಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಶ್, ಕೃಷ್ಣಪ್ಪ ಜಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿಪಿ ವರ್ಗೀಸ್, ಸರ್ವೋತ್ತಮ ಗೌಡ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಷಾ ಅಂಚನ್ ಹಾಗೂ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಎಲ್ಲ ಸದಸ್ಯರಿಗೆ ಕಡಬ ತಾಲೂಕು ಪಂಚ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
Post a Comment