ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವತಿಯಿಂದ ಈ ವರ್ಷದ ಗ್ರಾಮ ಸಭೆ ಸೋಮವಾರ ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜು ಬಳಿಯ ವಲ್ಲೀಶ ಸಭಾಭವನದಲ್ಲಿ ನಡೆಯಿತು. ಸಭೆಗೆ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಜೆ ಅಧ್ಯಕ್ಷತೆ ವಹಿಸಿದ್ದರು. ನೋಡಲ್ ಅಧಿಕಾರಿಯಾಗಿ ಸುಳ್ಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ‘ಸಂಜೀವಿನಿ ಘಟಕ’ದ ವ್ಯಾಪಾರ ಮಳಿಗೆಯನ್ನು ಅಧ್ಯಕ್ಷೆಯವರು ಉದ್ಘಾಟಿಸಿದರು. ಬಳಿಕ ಪಿಡಿಓ ಮಹೇಶ್ ಅವರು ಹಿಂದಿನ ವರ್ಷದ ಯೋಜನೆಗಳು, ಕೈಗೊಂಡ ಕೆಲಸಗಳ ವಿವರ ನೀಡಿದರು. ಈ ವೇಳೆ ಸಭೆಯಲ್ಲಿ ಕೆಲ ವಿಷಯಗಳ ಬಗ್ಗೆ ಗೊಂದಲ ಉಂಟಾಗಿ, ಗ್ರಾಮಸ್ಥರು ಹಾಗೂ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರ ಪ್ರಮುಖ ಆಕ್ರೋಶಗಳು:
ಕುಮಾರಧಾರ ನದಿ ನೀರಿನ ಅಶುದ್ಧತೆ, ಹೊಟೇಲ್ ಮತ್ತು ವಸತಿ ಗೃಹಗಳಿಂದ ನದಿಗೆ ತ್ಯಾಜ್ಯ ಬಿಟ್ಟಿರುವ ಪ್ರಕರಣ
ತುರ್ತು ಚಿಕಿತ್ಸೆ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳಾಂತರ
ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮವಿಲ್ಲದಿರುವುದು
ವಲಸೆ ಕಾರ್ಮಿಕರ ನಿರ್ವಹಣೆಯಲ್ಲಿ ಅಸಮರ್ಪಕತೆ
ಸರ್ಕಾರಿ ಜಾಗಗಳ ಅತಿಕ್ರಮಣ
ಈ ಎಲ್ಲ ಸಮಸ್ಯೆಗಳ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಿಡಿಓ ಸಭೆಯಲ್ಲೇ ಸ್ಪಷ್ಟವಾಗಿ “ಮುಂದೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಹಾಗೂ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ವಿಭಾಗೀಯ ಅಧಿಕಾರಿಗಳ ಮಾಹಿತಿ: ಸಭೆಯಲ್ಲಿ ಕಂದಾಯ, ಪಶು ವೈದ್ಯಕೀಯ, ಶಿಶು ಅಭಿವೃದ್ಧಿ ಯೋಜನೆ, ಅರಣ್ಯ, ಆರೋಗ್ಯ, ಮೆಸ್ಕಾಂ, ಪಿಡಬ್ಲ್ಯೂಡಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಂಬಂಧಿತ ಮಾಹಿತಿಗಳನ್ನು ಗ್ರಾಮಸ್ಥರಿಗೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು; ಗ್ರಾಮಸ್ಥರಾದ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತ ಅಧಿಕಾರಿ ಸುದರ್ಶನ್ ಜೋಯಿಸ್, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಕಿಶೋರ್ ಅರಂಪಾಡಿ, ಸತೀಶ ಕುಜುಗೋಡು,ಶಿವರಾಮ್ ರೈ, ಪವನ್ ಎಂಡಿ, ಶೇಷಕುಮಾರ ಶೆಟ್ಟಿ, ಕೃಷ್ಣಮೂರ್ತಿ ಭಟ್, ಶ್ರೀನಾಥ್ ಭಟ್, ರವಿ ಶೆಟ್ಟಿ, ಶೋಬಿತ್, ಗುಣವರ್ಧನ ಕೆದಿಲ್ಲ, ರತ್ನ ನೂಚೀಲ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು.
ವೇದಿಕೆಯಲ್ಲಿ ಉಪಸ್ಥಿತರಾಗಿದ್ದವರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಗ್ರಾ.ಪಂ ಉಪಾಧ್ಯಕ್ಷ ರಾಜೇಶ್ ಎನ್.ಎಸ್, ಸದಸ್ಯರು ರಾಜೇಶ್ ಕೆ., ಮಲ್ಲಿಕಾ, ಭಾರತಿ ದಿನೇಶ್, ನಾರಾಯಣ ಅಗ್ರಹಾರ, ದಿವ್ಯ, ಸವಿತಾ, ಸೌಮ್ಯ, ಜಯಂತಿ, ಮೋಹನ್ ಕೆ., ಶಶಿಕಲಾ, ದಿಲೀಪ್ ಉಪ್ಪಳಿಕೆ, ಭವ್ಯಕುಮಾರಿ, ಪುಷ್ಪಲತಾ, ಗಿರೀಶ್ ಆಚಾರ್ಯ, ಲಲಿತಾ ಜಿ., ಮೋಹಿನಿ ಎ.ಎಸ್, ಕಾರ್ಯದರ್ಶಿ ಮೋನಪ್ಪ ದೋಣಿಮಕ್ಕಿ ಮುಂತಾದವರು.
ಸಭೆಯಲ್ಲಿ ಉಂಟಾದ ಚರ್ಚೆಗಳು ಗ್ರಾಮಸ್ಥರ ನೈಜ ಸಮಸ್ಯೆಗಳನ್ನೇ ಪ್ರತಿಬಿಂಬಿಸುತ್ತಿದ್ದು, ಇದಕ್ಕೆ ಸೂಕ್ತ ಮತ್ತು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಗಳಿಂದ ದೊರಕಿದೆ.
Post a Comment