ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ಮಿಲನ ಸಂಜೀವಿನಿ ಘಟಕದ ವಾರ್ಷಿಕ *ಮಾಹಾಸಭೆಯು* ಆಗಸ್ಟ್ 19ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಮಹಿಳಾ ಸಬಲೀಕರಣದ ಮಹತ್ವ ಪೂರ್ಣ ಸಾಧನೆಗೆ ಕೌಕ್ರಾಡಿ ಮಿಲನ ಸಂಜೀವಿನಿ ಘಟಕ ಸಾಕ್ಷಿ ಯಾಗಿದೆ, ಕೌಕ್ರಾಡಿ ಗ್ರಾಮ ಪಂಚಾಯತಿನ ಅವಿಭಾಜ್ಯ ಅಂಗದಂತೆ ಕೆಲಸ ಮಾಡುತ್ತಿರುವ ಘಟಕ ಗ್ರಾಮ ನೈರ್ಮಲ್ಯದ ಜೊತೆಗೆ, ಗ್ರಾಮೀಣ ಮಹಿಳೆಯರ ಜೀವನೋಪಾಯ ಸಂವರ್ದನೆಗೆ ಸಹಾಯಕವಾಗುವ ಕಾರ್ಯಕ್ರಮಗಳ ಮೂಲಕ ಪಂಚಾಯತ್ ಅಭಿವೃದ್ಧಿಗೆ ಪೂರಕ ವಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘ ನೀಯ, ಗ್ರಾಮ ಪಂಚಾಯತ್ ಘಟಕದ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರ ನೀಡಲಿದೆ ಎಂದರು.
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪ್ರತಿಭಾ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಾಲಿನಿ, ಕಾರ್ಯದರ್ಶಿ ಶ್ರೀಮತಿ ದೇವಿಕಾ,ಒಕ್ಕೂಟದ ಪದಾಧಿಕಾರಿಗಳು ,ಗ್ರಾಮ ಪಂಚಾಯತ್ ಸದಸ್ಯರಾದ ರೋಹಿ ಇಚಲಂಪಾಡಿ, ಹನೀಫ್, ಭವಾನಿ, ಸವಿತಾ. ಎಸ್, ಶೈಲಾ, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಗ್ರಂಥ ಪಾಲಕಿ, ಆಶಾ ಕಾರ್ಯ ಕರ್ತೆಯರು, ಒಕ್ಕೂಟದ ಸಿಬ್ಬಂದಿಗಳು ಉಪಸ್ಥಿತರಿದ್ದರು,
ಶ್ರೀಮತಿ ಪ್ರತಿಭಾ ಸ್ವಾಗತಿಸಿ, ಕಾರ್ಯದರ್ಶಿ ಅಮಿತಾ ವರದಿಯನ್ನು ಮಂಡಿಸಿದರು, ಕೋಶಾಧಿಕಾರಿ ಸುಪ್ರಿತಾ ಜಮಾ ಖರ್ಚಿನ ವಿವರ ನೀಡಿದರು,
ಚಂದ್ರಿಕಾ ಧನ್ಯವಾದ ಸಮರ್ಪಿಸಿ, ಸ್ವರ್ಣಲತಾ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಘಟಕದ ಸದಸ್ಯರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು.
Post a Comment