ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಐನೆಕಿದು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿ ಹಾಗೂ ಪಕ್ಕದ ಅಂಗಡಿಗೆ ಕಳ್ಳರು ನುಗ್ಗಿದ ಘಟನೆ ಆ.17ರ ತಡರಾತ್ರಿ ಸಂಭವಿಸಿದ್ದು, ಆ.18ರಂದು ಬೆಳಕಿಗೆ ಬಂದಿದೆ.
ಹಾಲು ಸೊಸೈಟಿಯ ಶಟರ್ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹3,900 ನಗದು ಕಳ್ಳತನ ಮಾಡಿದ್ದು, ಪಕ್ಕದಲ್ಲಿದ್ದ ಯಶವಂತ ಕೊಪ್ಪಲಗದ್ದೆ ಅವರ ಅಂಗಡಿಯ ಬೀಗ ಮುರಿದು ಅಂದಾಜು ₹6,500 ನಗದು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಕಳ್ಳತನಕ್ಕೆ ಬಳಸಿದ ಪಿಕ್ಕಾಸಿಯನ್ನು ಕಳ್ಳರು ಸ್ಥಳದಲ್ಲೇ ಬಿಟ್ಟು ತೆರಳಿದ್ದರು.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಆ.ಕ್ರ.44/2025, ಕಲಂ 305, 331(4) ಬಿ.ಎನ್.ಎಸ್. ಅಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿಸಿದ ಪೊಲೀಸರಿಗೆ ಕಳ್ಳತನದ ವೇಳೆ ಬಳಸಿದ ಮದ್ಯದ ಪ್ಯಾಕೆಟ್ ಆಧಾರವಾಗಿ ಸುಳಿವು ಸಿಕ್ಕಿದ್ದು, ಸುಬ್ರಹ್ಮಣ್ಯ ಬಾರ್ ಸಹಕಾರದಿಂದ ಆರೋಪಿಯನ್ನು ಪತ್ತೆಹಚ್ಚಲಾಯಿತು.
ಈ ಹಿನ್ನೆಲೆಯಲ್ಲಿ ಮಂಜೇಶ್ವರ ನಿವಾಸಿ ಸತೀಶ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅವನ ವಶದಿಂದ ಒಟ್ಟು ₹3,057 ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ನಂತರ ಮಾನ್ಯ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Post a Comment